ADVERTISEMENT

ವಡಗೇರಾ ತಾಲ್ಲೂಕಿನಲ್ಲಿಲ್ಲ ಒಂದೂ ಪಿಯು ಕಾಲೇಜು ಇಲ್ಲ

ದೇವಿಂದ್ರಪ್ಪ ಬಿ.ಕ್ಯಾತನಾಳ
Published 28 ನವೆಂಬರ್ 2021, 14:28 IST
Last Updated 28 ನವೆಂಬರ್ 2021, 14:28 IST
ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆ
ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆ   

ವಡಗೇರಾ: ತಾಲ್ಲೂಕಿನಾದ್ಯಂತ ಬಹುತೇಕ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಮಕ್ಕಳು ಬಿಸಿಯೂಟ ಮಾಡಿದ ಮೇಲೆ ನೀರಿಗಾಗಿ ಪಕ್ಕದ ತಹಶೀಲ್ದಾರ್‌ ಕಚೇರಿಇಲ್ಲವೇಕೊಳವೆಬಾವಿ ಇದ್ದ ಕಡೆಅಲೆದಾಡುವ ಪರಿಸ್ಥಿತಿ ಇದೆ. ಇಲ್ಲದಿದ್ದರೆ ವಿದ್ಯಾರ್ಥಿಗಳು ಮನೆಯಿಂದಲೇನೀರು ತರಬೇಕು.

ತಾಲ್ಲೂಕಿನ ಮಾಚನೂರ ಗ್ರಾಮದಲ್ಲಿ ಶೌಚಾಲಯ ಕೊರತೆ ಇದ್ದು, ಶಾಲೆಯು ಗ್ರಾಮದ ಮಧ್ಯದಲ್ಲಿ‌ ಇರುವುದರಿಂದ ವಿದ್ಯಾರ್ಥಿಗಳು ಶೌಚ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಅದರಂತೆ ತಾಲ್ಲೂಕಿನ ಬಹುತೇಕ ಗ್ರಾಮದ ಶಾಲೆಗಳಲ್ಲಿ ಶೌಚಾಲಯದ ಕೊರತೆ ಇದೆ.

ADVERTISEMENT

ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 262 ವಿದ್ಯಾರ್ಥಿಗಳಿಗೆ ಕೇವಲ ಇಬ್ಬರು ಶಿಕ್ಷರು ಮಾತ್ರ ಇದ್ದಾರೆ. ಉಳಿದ ಮೂವರನ್ನು ಅತಿಥಿ ಶಿಕ್ಷಕರನ್ನು ತೆಗೆದುಕೊಂಡು ಶಾಲೆಯನ್ನು ನಡೆಸುವಂತ ಪರಿಸ್ಥಿತಿ ಎದುರಾಗಿದೆ. ಈ ಶಾಲೆಯಲ್ಲಿ ಇಂಗ್ಲಿಷ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಇದೆ. ಬಹುತೇಕ ಗ್ರಾಮಗಳ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಇದೆ.

ವಡಗೇರಾ ತಾಲ್ಲೂಕುಕೇಂದ್ರವಾಗಿ ಸುಮಾರು ಐದು ವರ್ಷಗಳ ಕಾಲ ಕಳೆಯುತ್ತಾ ಬಂದರೂಇಲ್ಲಿಯವರೆಗೆ ಒಂದೇ ಒಂದೂಪಿಯು ಕಾಲೇಜು ತೆಗೆದಿಲ್ಲ. ಇದರಿಂದ ಕೆಲವು ವಿದ್ಯಾರ್ಥಿಗಳು ದೂರದ ನಗರಗಳಿಗೆ ತೆರಳದೇ ತಮ್ಮ ವಿದ್ಯಾಭ್ಯಾಸವನ್ನು ಅಂತ್ಯಗೊಳಿಸಿದ್ದಾರೆ. ಪಟ್ಟಣದಲ್ಲಿ ಮತ್ತು ಬೆಂಡೆಬೆಂಬಳಿ ಗ್ರಾಮದಲ್ಲಿ ಆದೇಶವಾಗಿದ್ದ ಕಾಲೇಜುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಈ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಫಕೀರ್ ಅಹ್ಮದ್ ಮರಡಿ ಆರೋಪಿಸಿದ್ದಾರೆ.

‘ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಶಿಕ್ಷಕರಕೊರತೆಇರುವುದು ವಡಗೇರಾ ತಾಲ್ಲೂಕಿನಲ್ಲಿ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಉಂಟಾಗುತ್ತಿದೆ. ಎಲ್ಲಾ ಶಾಲೆಯಲ್ಲಿ ಎಲ್ಲಾ ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ಪಟ್ಟಣ ನಿವಾಸಿ ಅಬ್ದುಲ್ ಚಿಗಾನೂರ ಆಗ್ರಹಿಸಿದ್ದಾರೆ.

*ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಇದೆ. ಈಗಾಗಲೇ ಎರಡು ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ಅವು ಹದಗೆಟ್ಟಿವೆ. ಗ್ರಾ.ಪಂ ಆಡಳಿತ ಅವುಗಳನ್ನು ದುರಸ್ತಿ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು

- ಮಲ್ಲಣ್ಣಗೌಡ ಬಿ.ಪಾಟೀಲ, ಮಾಚನೂರ ಶಾಲೆ ಮುಖ್ಯಶಿಕ್ಷಕ

*ವಡಗೇರಾ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಕುರಿತು ಈಗಾಗಲೇ ಪ್ರಾದೇಶಿಕ ಆಯುಕ್ತರು, ಮುಖ್ಯ ಆಯುಕ್ತರು ಮಾಹಿತಿ ಪಡೆದಿದ್ದಾರೆ. ಮುಂದಿನ ದಿನದಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ನೇಮಕಾತಿಯಲ್ಲಿ ನೇಮಕ ಮಾಡಿಕೊಳ್ಳುತ್ತೇವೆ

- ರುದ್ರಗೌಡ ಪಾಟೀಲ, ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ

*ಈ ಭಾಗಕ್ಕೆ ಪಿಯುಸಿ ಕಾಲೇಜು ಅತಿ ಮುಖ್ಯವಾಗಿಬೇಕಾಗಿದೆ. ಅಂತರದಲ್ಲಿ ಈ ಭಾಗದ ಎರಡು ಕಾಲೇಜುಗಳನ್ನು ಸ್ಥಳಾಂತರ ಮಾಡಿದ್ದು ದುರದೃಷ್ಟ. ಶೀಘ್ರವೇ ಪಿಯುಸಿ ಕಾಲೇಜು ಆರಂಭ ಮಾಡಬೇಕು
- ಹನುಮೇಗೌಡ ಬೀರನಕಲ್, ಜೆಡಿಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.