ಸುರಪುರ: ನಗರದ ಅರಮನೆಯ ಹಳೆ ಪ್ರವೇಶ ದ್ವಾರದ ಮೇಲೆ ಗಿಡ ಬೆಳೆದಿದ್ದು, ಅದರ ಬೇರುಗಳಿಂದಾಗಿ ಗೋಡೆ ಬಿರುಕುಬಿಟ್ಟಿದೆ. ಈಗ ಹಳೆ ಅರಮನೆಯಲ್ಲಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ನಡೆಯುತ್ತಿದೆ. ಇದಕ್ಕೆ ದರಬಾರ(ಅರಮನೆ) ಶಾಲೆ ಎಂದೂ ಕರೆಯುತ್ತಾರೆ.
ಸುರಪುರದ ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ಪ್ರವೇಶ ದ್ವಾರ ಆಕರ್ಷಣೆಯ ಸ್ಥಳವೂ ಆಗಿದೆ. ಗೋಡೆ ಬೀಳುವ ಸ್ಥಿತಿಯಲ್ಲಿದ್ದು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ತಕ್ಷಣ ಗಿಡ ತೆರವುಗೊಳಿಸಿ, ಈ ಸ್ಮಾರಕವನ್ನು ರಕ್ಷಿಸಬೇಕು ಎಂದು ಶಾಲೆ ಹಳೆ ವಿದ್ಯಾರ್ಥಿಗಳಾದ ಡಿ.ಎಂ. ಕುಲಕರ್ಣಿ ಬೆಂಗಳೂರು, ನಾಗರಾಜ ದೇಸಾಯಿ ಕಲಬುರಗಿ ಇತರರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.