ADVERTISEMENT

‘ಕೌಶಲ ಅಭಿವೃದ್ಧಿಗೆ ಜಿಟಿಟಿಸಿ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:10 IST
Last Updated 21 ಜೂನ್ 2025, 14:10 IST
ಸೈದಾಪುರ ಸಮೀಪದ ಕಡೇಚೂರು ಜಿಟಿಟಿಸಿ ಕೇಂದ್ರದಲ್ಲಿ ನೆಡೆದ ಪಾಲಕರ ಸಭೆಗೆ ಚಾಲನೆ ನೀಡಲಾಯಿತು
ಸೈದಾಪುರ ಸಮೀಪದ ಕಡೇಚೂರು ಜಿಟಿಟಿಸಿ ಕೇಂದ್ರದಲ್ಲಿ ನೆಡೆದ ಪಾಲಕರ ಸಭೆಗೆ ಚಾಲನೆ ನೀಡಲಾಯಿತು   

ಕಡೇಚೂರು(ಸೈದಾಪುರ): ‘ಶಿಕ್ಷಣದ ಜತೆಗೆ ಕೌಶಲ ಅಭಿವೃದ್ಧಿಗೆ ಕೈಗಾರಿಕಾ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಅತ್ಯಂತ ಉತ್ತಮವಾಗಿದೆ’ ಎಂದು ಪ್ರಾಂಶುಪಾಲ ರವಿಚಂದ್ರ ಹೇಳಿದರು.

ಸಮೀಪದ ಕಡೇಚೂರು ಕೈಗಾರಿಕಾ ಪ್ರದೇಶದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಜ್ಯದ 33 ಸ್ಥಳಗಳಲ್ಲಿ ಜಿಟಿಟಿಸಿ ಕೇಂದ್ರಗಳಿವೆ. ಈ ಕೈಗಾರಿಕಾ ಮತ್ತು ತರಬೇತಿ ಕೇಂದ್ರಗಳಲ್ಲಿ ಸರಿಯಾಗಿ ಅಧ್ಯಯನ ಮಾಡಿದ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವ ಭರವಸೆಯಿದೆ. ವಿದ್ಯಾರ್ಥಿಗಳು ವಾಸ್ತವವನ್ನು ಅರಿತು ತರಬೇತಿ ಪಡೆದುಕೊಳ್ಳಬೇಕು. ಬುದ್ಧಿವಂತಿಕೆ ಹಾಗೂ ಕೌಶಲ ಹೆಚ್ಚಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸುವ ಹಾದಿಯಲ್ಲಿ ಸಾಗಬೇಕು. ತರಬೇತಿ ಎನ್ನುವುದು ಒಮ್ಮೆ ಕಲಿತರೆ, ಅದು ನಮ್ಮ ಜೀವನವಿಡಿ ಮರೆಯಲು ಸಾಧ್ಯವಿಲ್ಲ. ಅದು ಸಂಕಷ್ಟದ ಸಮಯದಲ್ಲಿ ನಮ್ಮ ಬದಕು ಸಾಗಿಸುವ ಅಸ್ತ್ರವಾಗುತ್ತದೆ. ಈಗಿನ ಕಾಲದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆಯಿದೆ. ಸ್ಪರ್ಧಾತ್ಮಕ ಯುಗದಲ್ಲಿ ನಮ್ಮದೆ ಆದ ಜ್ಞಾನ ಮತ್ತು ಕೌಶಲದೊಂದಿಗೆ ಉತ್ತಮ ಗುರಿಯತ್ತ ಸಾಗಬೇಕು. ವಿದ್ಯಾರ್ಥಿಗಳು ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಗ್ರಾ.ಪಂ ಅಧ್ಯಕ್ಷೆ ಕಮಲಮ್ಮ, ನಿವೃತ್ತ ಶಿಕ್ಷಕ ಸಿದ್ದಪ್ಪ ಆವಂಟಿ, ಬಳಿಚಕ್ರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಅನ್ನಪೂರ್ಣ, ಧರ್ಮರಾಜ, ವಿಜಯಕುಮಾರ, ಪ್ರಿಯಾಂಕಾ ದಿವಟಗಿ, ಪ್ರದೀಪ್ ದದ್ದಲ್, ಹನುಮಂತ, ಅಕ್ಷಯ, ಸುಮಾ, ಶಿವಲಿಂಗಯ್ಯ, ಸುಖಮನಿ, ಹುಸೇನ್, ಅಂಕುಶ, ಮಂಜುನಾಥ, ಬಾಲಾಜಿ, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಇತರರಿದ್ದರು. ಹಿರಿಯ ಉಪನ್ಯಾಸಕ ವೆಂಕಟರಾವ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.