ಕಕ್ಕೇರಾ: ಸಹೋದರರಿಬ್ಬರ ಜಗಳವು ಕೋಳಿಗಳಿಗೆ ವಿಷ ಉಣಿಸಿ ಸಾಯಿಸುವವರೆಗೆ ತಲುಪಿದ್ದು, ಕೊಡೇಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಟ್ಟಣದ ಸಮೀಪದ ಮಂಜಲಾಪುರ ಗ್ರಾಮದ ರಾತ್ರೆಪ್ಪ ಪೂಜಾರಿ ಹಾಗೂ ಅಯ್ಯಪ್ಪ ಪೂಜಾರಿ ಸಹೋದರರು. ಇಬ್ಬರ ನಡುವೆ ಹಳೆ ವೈಶಮ್ಯವಿದ್ದು, ಜಗಳ ನಡೆದಿದೆ. ಇದರಿಂದ ಕೋಪಗೊಂಡ ಅಯ್ಯಪ್ಪ ಪೂಜಾರಿ ಹಾಗೂ ಆತನ ಮಕ್ಕಳು ಸೇರಿಕೊಂಡು ಕೋಳಿಗಳಿಗೆ ವಿಷ ಉಣಿಸಿದ್ದಾರೆ ಎಂದು ರಾತ್ರೆಪ್ಪ ಪೂಜಾರಿ ಅವರು ದೂರಿ ನೀಡಿದ್ದಾರೆ ಎಂದು ಪಿಎಸ್ಐ ಅಯ್ಯಪ್ಪ ತಿಳಿಸಿದ್ದಾರೆ.
‘ನೂರಾರು ಕೋಳಿಗಳು ಬಲಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.