ಸುರಪುರದಲ್ಲಿ ಶನಿವಾರ ಶೋಷಿತರ ಜಾಗೃತಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು
ಸುರಪುರ: ‘ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ನ.28ರಂದು ಬೆಳಿಗ್ಗೆ 11 ಗಂಟೆಗೆ ಭಾರತ ಸಂವಿಧಾನ ದಿನ ಅಂಗವಾಗಿ ಜಿಲ್ಲಾಮಟ್ಟದ ಶೋಷಿತರ ಜಾಗೃತಿ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸಂಚಾಲಕ ನಿಂಗಣ್ಣ ಗೋನಾಲ ತಿಳಿಸಿದರು.
ನಗರದಲ್ಲಿ ಶನಿವಾರ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ‘ಸಂವಿಧಾನದ ಮಹೋನ್ನತ ಆಶಯಗಳು, ಹಕ್ಕು, ಅವಕಾಶಗಳ ಬಗ್ಗೆ ಸಮಸ್ತ ಶೋಷಿತ ವರ್ಗಗಳಿಗೆ ಜಾಗೃತಿ ಮೂಡಿಸಲು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಶೋಷಿತರ ಜಾಗೃತಿ ದಿನ ಕಾರ್ಯಕ್ರಮ ಆಯೋಜಿಸಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಬೇಕು’ ಎಂದು ಕೋರಿದರು.
‘ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸುವರು. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ, ಶಾಸಕ ರಾಜಾ ವೆಂಕಟಪ್ಪ ನಾಯಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಅಧ್ಯಕ್ಷತೆ ವಹಿಸುವರು. ಪ್ರಮುಖರಾದ ಹನುಮಂತಪ್ಪ ಕಾಕರಗಲ್, ಎಸ್. ಫಕೀರಪ್ಪ ಮುಂಡಗೋಡ, ರಾಜಾ ಮುಕುಂದನಾಯಕ, ಡಾ.ಆರ್.ವಿ. ನಾಯಕ, ಧರ್ಮಣ್ಣ ಡಿ.ಎಂ., ದೇವೀಂದ್ರನಾಥ ನಾದ್, ನಂದಕುಮಾರ ಬಾಂಬೇಕರ್, ನಾಗಣ್ಣ ಕಲ್ಲದೇವನಹಳ್ಳಿ, ರಾಹುಲ ಹುಲಿಮನಿ, ಮಲ್ಲಿಕಾರ್ಜುನ ಕ್ರಾಂತಿ ಪಾಲ್ಗೊಳ್ಳುವರು’ ಎಂದರು.
‘ಕಾರ್ಯಕ್ರಮಕ್ಕೂ ಮುಂಚೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ರಂಗಂಪೇಟೆ ಮಾರ್ಗವಾಗಿ ನಗರದ ಅಂಬೇಡ್ಕರ್ ವೃತ್ತ ಮತ್ತು ಮಹಾತ್ಮ ಗಾಂಧಿ ವೃತ್ತದ ಮೂಲಕ ವೇದಿಕೆಯವರೆಗೆ ಬೈಕ್ ರ‍್ಯಾಲಿ ನಡೆಯಲಿದೆ’ ಎಂದರು.
ಪದಾಧಿಕಾರಿಗಳಾದ ನಾಗರಾಜ ಓಕಳಿ, ಎಸ್.ಆರ್.ಬಡಿಗೇರ ಕೆಂಭಾವಿ, ಧರ್ಮಣ್ಣ ಹೊಸ್ಮನಿ, ರಮೇಶ ಪೂಜಾರಿ, ಹಣಮಂತ ದೊಡ್ಡಮನಿ ಶೆಳ್ಳಗಿ, ಬಸವರಾಜ ಮುಷ್ಠಳ್ಳಿ, ಮಾನಪ್ಪ ಶೆಳ್ಳಗಿ, ಚಂದ್ರು ಪತ್ತೆಪುರ, ಸಾಯಬಣ್ಣ ಎಂಟಮನಿ ಕೆಂಭಾವಿ, ಚಂದ್ರು ದಿವಳಗುಡ್ಡ, ಹುಲಗಪ್ಪ ಶೆಳ್ಳಗಿ, ಅನಿಲ ಕಟ್ಟಿಮನಿ, ಭೀಮಣ್ಣ ಅಡ್ಡೋಡಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.