ADVERTISEMENT

ಪ್ರಜಾವಾಣಿ ಅಮೃತ ಮಹೋತ್ಸವ: ಯುವತಿಯರಿಗಾಗಿ 3 ಕಿ.ಮೀ ಓಟದ ಸ್ಪರ್ಧೆ 

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 5:28 IST
Last Updated 10 ಮಾರ್ಚ್ 2023, 5:28 IST
'ಪ್ರಜಾವಾಣಿ' ಅಮೃತ ಮಹೋತ್ಸವದ ಅಂಗವಾಗಿ ಯಾದಗಿರಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯುರು
'ಪ್ರಜಾವಾಣಿ' ಅಮೃತ ಮಹೋತ್ಸವದ ಅಂಗವಾಗಿ ಯಾದಗಿರಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯುರು    

ಯಾದಗಿರಿ: 'ಪ್ರಜಾವಾಣಿ' ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಯುವತಿಯರಿಗಾಗಿ ನಗರದಲ್ಲಿ ಶುಕ್ರವಾರ 3 ಕಿ.ಮೀ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ನಗರದ ಹಳೆ ಬಸ್ ನಿಲ್ದಾಣದಲ್ಲಿ ಓಟದ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಡಾ.ಟಿ.ರೋಣಿ, 'ಪ್ರಜಾವಾಣಿ' ಅಮೃತ ಮಹೋತ್ಸವ ಅಂಗವಾಗಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಮತದಾನ ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದರು.

ನಗರದ ಮುಖ್ಯರಸ್ತೆಗಳಲ್ಲಿ ಓಟ ನಡೆಯಲಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸುವುದಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ADVERTISEMENT

ಓಟದ ಸ್ಪರ್ಧೆ

ನಗರದ ಹಳೆ ಬಸ್‌ ನಿಲ್ದಾಣದಿಂದ ಸುಭಾಷ್‌ ವೃತ್ತ, ಶಾಸ್ತ್ರಿ ವೃತ್ತ (ಮುದ್ನಾಳ ಪೆಟ್ರೋಲ್ ಬಂಕ್), ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ ಹೊಸಳ್ಳಿ ವೃತ್ತ, ಲುಂಬಿನಿವನ ತಲುಪಿತು.

ಇದೇ ವೇಳೆ ಸ್ವೀಪ್ ಸಮಿತಿ ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಮಾತದಾನದ ಜಾಗೃತಿ ಘೋಷಣೆಗಳನ್ನು ಕೂಗಲಾಯಿತು.

ನಂತರ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತದಾನ ತಪ್ಪದೇ ಮಾಡಬೇಕು ಎಂದು ಅರಿವು ಮೂಡಿಸಲಾಯಿತು.

ಈ ವೇಳೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಪ್ರಭಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಕ್ಷ್ಮೀಕಾಂತ ಒಂಟಿಪೀರ, ಜಿಲ್ಲಾ ಅಂಗವಿಕಲರ ಕಲ್ಯಾಧಿಕಾರಿ ಸಾದೀಕ್ ಖಾನ್ ಹುಸೇನ್, ನಗರ ಕೇಂದ್ರದ ಆರೋಗ್ಯಾಧಿಕಾರಿ ಡಾ.ವಿನಿತಾ, ಎನ್ ಸಿಡಿ ಘಟಕದ ಡಾ.ರಶೀದ್, ಮೆಹಬೂಬ್, ನಟರಾಜ, ವಿಜಯಕುಮಾರ, ಮಹೇಂದ್ರ, ಮಹಾಲಕ್ಷ್ಮೀ, ಡಾ.ಸುನೀತಾ ಸಿಂಧೆ, ಆಶಾ ಕಾರ್ಯಕರ್ತೆಯರಾದ ಮಂಜುಳಾ, ಸರಸ್ವತಿ, ರುಕ್ಸಾನಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ₹5,000, ದ್ವಿತೀಯ ಸ್ಥಾನ ₹3,000, ತೃತೀಯ ಸ್ಥಾನ ₹1,500 ಮತ್ತು ಪದಕಗಳನ್ನು ವಿತರಿಸಲು ಕಾರ್ಯಕ್ರಮ ಅಯೋಜನೆ ಮಾಡಿ ನೀಡಲಾಗುವುದು ಎಂದು ಕ್ರೀಡಾ ಇಲಾಖೆ ಅಧಿಕಾರಿ ರಾಜು ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.