ADVERTISEMENT

ಟಿಎಂಸಿ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 3:12 IST
Last Updated 20 ಏಪ್ರಿಲ್ 2021, 3:12 IST
ಹುಣಸಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ತಹಶೀಲ್ದಾರ್ ಮಹಾದೇವಪ್ಪ ಬಿರಾದರ ಅವರಿಗೆ ಮನವಿ ಸಲ್ಲಿಸಲಾಯಿತು
ಹುಣಸಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ತಹಶೀಲ್ದಾರ್ ಮಹಾದೇವಪ್ಪ ಬಿರಾದರ ಅವರಿಗೆ ಮನವಿ ಸಲ್ಲಿಸಲಾಯಿತು   

ಹುಣಸಗಿ: ಪಶ್ಚಿಮ ಬಂಗಾಳದಲ್ಲಿ ಪರಿಶಿಷ್ಟ ಸಮುದಾಯದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್ ಹಾಗೂ ಆ ಪಕ್ಷದ ನಾಯಕಿ ಸುಜಾತಾ ಮೊಂಡಲ್‌ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹುಣಸಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮಂಡಲ (ಸುರಪುರ ಮತ್ತು ಹುಣಸಗಿ) ಅಧ್ಯಕ್ಷ ಮೇಲಪ್ಪ ಗುಳಗಿ ಮಾತನಾಡಿ, ‘ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಸುಜಾತಾ ಮೊಂಡಾಲ್ ಖಾನ್ ಅವರು ಪರಿಶಿಷ್ಟ ಸಮುದಾಯದವರನ್ನು ಭಿಕ್ಷುಕರು ಎಂದು ಹೇಳಿದ್ದು, ಸಮಸ್ತ ಸಮುದಾಯದವರನ್ನು ಅವಮಾನಿಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗಿದ್ದು, ಖಂಡನೀಯ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಶರಣಪ್ಪ ಗುಳಬಾಳ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿನ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರ ಈ ಹೇಳಿಕೆ ಸಮಾಜದಲ್ಲಿ ಪರಸ್ಪರ ಸಾಮರಸ್ಯ ಹಾಳು ಮಾಡುತ್ತಿರುವುದಲ್ಲದೆ ದ್ವೇಷ ಉಂಟು ಮಾಡುವಂತಾಗಿದೆ. ಇದರಿಂದಾಗಿ ಸಮುದಾಯದ ಜನರಿಗೆ ತೀವ್ರ ನೋವಾಗಿದೆ ಎಂದರು.

ADVERTISEMENT

ಮನವಿಪತ್ರವನ್ನು ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ವೀರೇಶ ಚಿಂಚೋಳಿ, ಶಿವನಗೌಡ ಎಸ್.ಪಾಟೀಲ್, ರಾಜಶೇಖರ ದೇಸಾಯಿ, ಮಹೇಶ ಸ್ಥಾವರಮಠ, ನಂದಪ್ಪ ಪೀರಾಪುರ, ಚಂದ್ರಶೇಖರ ಗೋನಾಲ್, ವಿಠ್ಠಲ ಪವಾರ್, ಆನಂದ ಬಾರಿಗಿಡದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.