ADVERTISEMENT

‘ಮತೀಯ ಕಾರಣದಿಂದ ಕನ್ಹಯ್ಯ ಲಾಲ್ ಹತ್ಯೆ’

ಗುರುಮಠಕಲ್: ವಿವಿಧ ಸಂಘಟನೆಗಳಿಂದ ಬಂದ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:25 IST
Last Updated 2 ಜುಲೈ 2022, 4:25 IST
ಗುರುಮಠಕಲ್ ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ಶುಕ್ರವಾರ ಜಮಾಯಿಸಿದ ಪ್ರತಿಭಟನಾಕಾರರು ಕನ್ಹಯ್ಯ ಲಾಲ್ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು
ಗುರುಮಠಕಲ್ ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ಶುಕ್ರವಾರ ಜಮಾಯಿಸಿದ ಪ್ರತಿಭಟನಾಕಾರರು ಕನ್ಹಯ್ಯ ಲಾಲ್ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು   

ಗುರುಮಠಕಲ್: ‘ಜಾತಿ, ಮತ, ಪಂಗಡಗಳ ಹೆಸರಿನಲ್ಲಿ ನಡೆಯುವ ಹತ್ಯೆಗಳು ಅನಾರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರೇರಕವಾಗುತ್ತದೆ. ರಾಜಸ್ಥಾನದ ಉದಯಪುರದ ಕನ್ಹಯ್ಯ ಲಾಲ್ ಅವರನ್ನು ಮತೀಯ ಕಾರಣಕ್ಕೆ ಹತ್ಯೆ ಮಾಡಿದ್ದು ಸಹನೀಯವಾದುದಲ್ಲ’ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಶುಕ್ರವಾರ ಮೇರಾ ಭಾರತ್ ಮಹಾನ್ ವೇದಿಕೆಯಿಂದ ‘ಕನ್ಹಯ್ಯ ಲಾಲ್ ಹತ್ಯೆ ವಿರೋಧಿಸಿ’ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಪಟ್ಟಣದ ಸಿಹಿನೀರ ಬಾವಿಯಿಂದ ಬಸ್ ನಿಲ್ದಾಣ, ಕಾಕಲವಾರ ಕ್ರಾಸ್ ಮೂಲಕ ಬಸವೇಶ್ವರ ವೃತ್ತದ ವರೆಗೆ ಮೆರವಣಿಗೆಯ ಮೂಲಕ ಆಗಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದ ನಂತರ ತಹಶಿಲ್ದಾರ್ ಶರಣಬಸವ ರಾಣಪ್ಪ ಅವರಿಗೆ ಮನವಿ ಪತ್ರ ನೀಡಲಾಯಿತು.

ADVERTISEMENT

ಬಂದ್ ಯಶಸ್ವಿ: ಹಿಂದೂಪರ ಸಂಘಟನೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ನೀಡಿದ್ದ ಸ್ವಯಂಪ್ರೇರಿತ ಬಂದ್ ಕರೆಗೆ ವರ್ತಕರು ಶುಕ್ರವಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲವ್ಯಕ್ತಪಡಿಸಿದರು.

ಮೇರಾ ಭಾರತ್ ಮಹಾನ್ ವೇದಿಕೆಯ ಅಧ್ಯಕ್ಷ ಗುರುನಾಥ ತಲಾರಿ, ರಾಜಾ ರಮೇಶ ಗೌಡ, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ವಿಜಯಕುಮಾರ ಚಿಂಚನಸೂರ, ಜಗದೀಶ ಭೂಮಾ, ವೀರಪ್ಪ ಪ್ಯಾಟಿ, ನರಸೀಮುಲು ನಿರೇಟಿ, ಚಂದುಲಾಲ್ ಚೌದ್ರಿ, ಆಶೋಕ ಸಂಜನೋಳ, ಮಲ್ಲಿಕಾರ್ಜುನ ಹಿರೇಮಠ, ಡಾ.ಭೀಮಶಂಕರ ಮುತ್ತಗಿ, ಧನರಾಜ ವಾರದ, ಚಂದ್ರಕಾಂತ ಚೌದ್ರಿ, ವೀರೇಶ ಅವಂಟಿ, ವಿಶಾಲ ಮುತ್ತಗಿ, ಶಂಕರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.