ADVERTISEMENT

ಹುಣಸಗಿ: ನಕಲಿ ಮದ್ಯ ಮಾರಾಟ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮೇ 2022, 3:46 IST
Last Updated 31 ಮೇ 2022, 3:46 IST
ಹುಣಸಗಿಯಲ್ಲಿ ಗೋರ್ ಸೇನಾ ಕಾರ್ಯಕರ್ತರು ನಕಲಿ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು
ಹುಣಸಗಿಯಲ್ಲಿ ಗೋರ್ ಸೇನಾ ಕಾರ್ಯಕರ್ತರು ನಕಲಿ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು   

ಹುಣಸಗಿ: ರಾಜ್ಯದಲ್ಲಿ ಅಕ್ರಮ ಹಾಗೂ ನಕಲಿ ಮದ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಗೋರ ಸೇನಾ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಹಶೀಲ್ದಾರ್ ಅಶೋಕಕುಮಾರ್ ಸುರಪುರಕರ್ ಅವರಿಗೆ ಸಲ್ಲಿಸಿ ಮಾತ ನಾಡಿದ ಸಂತೋಷ ಯರಕಿಹಾಳ, ತಾಂಡಾ ಹಾಗೂ ಗ್ರಾಮ ಭಾಗದಲ್ಲಿ ನಕಲಿ ಮತ್ತು ಅಕ್ರಮ ಮದ್ಯ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ಯುವಕರು ಮದ್ಯ ಕುಡಿತಕ್ಕೆ ದಾಸರಾಗುತ್ತಿದ್ದಾರೆ ಎಂದರು.

ಶಹಾಪುರದಲ್ಲಿ ನಕಲಿ ಮದ್ಯ ಮಾರಾಟದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲು ಹೋದಾಗ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇದನ್ನು ಗೋರ್ ಸೇನೆ ಖಂಡಿಸುತ್ತದೆ ಎಂದು ಹೇಳಿದರು.

ಗ್ರಾ.ಪಂ ಸದಸ್ಯ ತಾರಾನಾಥ ಚವ್ಹಾಣ ಮಾತನಾಡಿ, ಅಬಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವ ಹಿಂದಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು. ನಕಲಿ ಮದ್ಯ ಮಾರಾಟವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ವಜ್ಜಲ ತಾಂಡಾದ ವಿಠ್ಠಲ ಮಾಹಾರಾಜಾ, ಸೇನಾದ ಮುಖಂಡರಾದ ಪ್ರಕಾಶ ಪವಾರ್, ಕೃಷ್ಣ ಜಾಧವ, ಹರಿಕೃಷ್ಣ, ತಾರಾನಾಥ ಚವ್ಹಾಣ ಹುಣಸಗಿ, ಕೃಷ್ಣ ಸೊನ್ನಾಪುರ ತಾಂಡಾ, ಚಂದ್ರಶೇಖರ ಐ.ಬಿ ತಾಂಡಾ, ಸೋಮಪ್ಪ, ಪಿಂಟೂ ಗೆದ್ದಲಮರಿ, ಗುಂಡು ರಾಜವಾಳ ತಾಂಡಾ, ಬಾಲಚಂದ್ರ, ಆನಂದ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.