ADVERTISEMENT

ಪಿಯು ಪರೀಕ್ಷೆ: 110 ವಿದ್ಯಾರ್ಥಿಗಳು ಗೈರು

ಜೀವಶಾಸ್ತ್ರ, ಭೂಗೋಳಶಾಸ್ತ್ರ ವಿಷಯದ ಪರೀಕ್ಷೆ, 2,286 ಹಾಜರು

​ಪ್ರಜಾವಾಣಿ ವಾರ್ತೆ
Published 4 ಮೇ 2022, 16:25 IST
Last Updated 4 ಮೇ 2022, 16:25 IST

ಯಾದಗಿರಿ: ದ್ವಿತೀಯ ಪಿಯುಸಿ ಜೀವಶಾಸ್ತ್ರ ಮತ್ತು ಭೂಗೋಳಶಾಸ್ತ್ರ ವಿಷಯದ ಪರೀಕ್ಷೆಗಳು ಬುಧವಾರ ನಡೆದವು.

ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪದವಿ ಪೂರ್ವ ಪರೀಕ್ಷೆಯೂ ನಡೆಯುತ್ತಿದ್ದು, ಜೀವಶಾಸ್ತ್ರ ವಿಷಯದ ಪರೀಕ್ಷೆಗೆ 2,278 ವಿದ್ಯಾರ್ಥಿಗಳು ನೋಂದಾಯಿಸಿದ್ದರೆ, 2,173 ಹಾಜರಾಗಿದ್ದರು. 105 ಗೈರಾಗಿದ್ದಾರೆ.

ಭೂಗೋಳಶಾಸ್ತ್ರ ಪರೀಕ್ಷೆಗೆ 118 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. 113 ವಿದ್ಯಾರ್ಥಿಗಳು ಹಾಜರಾಗಿದ್ದರು. 5 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ADVERTISEMENT

ಗುರುಮಠಕಲ್‌ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ಪರೀಕ್ಷೆಗೆ 117 ವಿದ್ಯಾರ್ಥಿಗಳಲ್ಲಿ 112 ಹಾಜರಾಗಿದ್ದಾರೆ. ಭೀಮರಾಯನಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1 ವಿದ್ಯಾರ್ಥಿ ನೋಂದಾಯಿಸಿಕೊಂಡು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಹಿಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.