ADVERTISEMENT

ಬಿರುಸಿನ ಮಳೆಗೆ ಭರ್ತಿಯಾದ ಕೆರೆಗಳು

ಜಲಾವೃತಗೊಂಡ ರಸ್ತೆಗಳು, ಹೊಲಗಳಲ್ಲಿ ಸಂಗ್ರಹಗೊಂಡ ನೀರು, ರೈತರಲ್ಲಿ ಮೂಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 7:13 IST
Last Updated 7 ಅಕ್ಟೋಬರ್ 2022, 7:13 IST
ಯರಗೋಳ ಸಮೀಪದ ಹೊರಗೇರಾ ಗ್ರಾಮದ ರಸ್ತೆಯೊಂದು ಮಳೆ ನೀರಿನಿಂದ ಜಲಾವೃತಗೊಂಡಿರುವುದು
ಯರಗೋಳ ಸಮೀಪದ ಹೊರಗೇರಾ ಗ್ರಾಮದ ರಸ್ತೆಯೊಂದು ಮಳೆ ನೀರಿನಿಂದ ಜಲಾವೃತಗೊಂಡಿರುವುದು   

ಯರಗೋಳ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ತಾಲ್ಲೂಕಿನ ಕೆರೆಗಳು ಭರ್ತಿಯಾಗಿವೆ. ಗುರುವಾರವೂ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೆ, ಕೆಲವು ಮನೆಗಳ ಗೋಡೆಗಳು ಕುಸಿದು ಹಾನಿಯಾಗಿದೆ.

ಗ್ರಾಮದ ದೊಡ್ಡ ಕೆರೆ (202 ಹೆಕ್ಟೇರ್‌ ವಿಸ್ತೀರ್ಣ) ಸೇರಿ ಖಾನಳ್ಳಿ, ಚಾಮನಹಳ್ಳಿ, ಅಲ್ಲಿಪುರ, ಕಂಚಗಾರ ಹಳ್ಳಿ, ವಡ್ನಳ್ಳಿ, ಬೆಳಗೇರಾ, ಬಾಚವಾರ, ಚಾಮನಹಳ್ಳಿ ಕೆರೆಗಳು ತುಂಬಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಬಿರುಸಿನ ಮಳೆಗೆ ರೈತರು ನಷ್ಟ ಅನುಭವಿಸುವಂತಾಗಿದೆ. ಶೇಂಗಾ ಬಿತ್ತನೆಯಾಗಿದ್ದು, ಬೀಜಗಳು ಕೊಳೆಯುತ್ತಿವೆ. ಹತ್ತಿಹೊಲಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಬೆಳಹಾನಿ ಯಾಗುವ ಆತಂಕ ಎದುರಾಗಿದೆ ಎಂದುಹೊನಗೇರಾ ಗ್ರಾ.ಪಂ. ಸದಸ್ಯ ಶರಣು ಎಮ್ಮೆನೊರು ಅಳಲು ತೋಡಿಕೊಂಡರು.

ADVERTISEMENT

ಮಲ್ಕಪನಳ್ಳಿಯಲ್ಲಿ ರೈಲು ಕೆಳ ಸೇತುವೆ ಜಲಾವೃತಗೊಂಡಿದ್ದು, ಸಂಚಾರ ಕಡಿತಗೊಂಡಿದೆ. ಯಾದಗಿರಿ–ಅಬ್ಬೆತುಮಕೂರು ಮಾರ್ಗದಲ್ಲಿ ಹಳ್ಳದ ನೀರು ರಸ್ತೆ ಮೇಲೆ ಹರಿದಾಡುತ್ತಿದೆ. ರಸ್ತೆಗಳು ಚರಂಡಿಗಳಂತಾಗಿದ್ದು, ಸಾರ್ವ ಜನಿಕರಿಗೆ, ವಾಹನ ಸಂಚಾರಿ ಗಳಿಗೆ, ಕೃಷಿಕರಿಗೆ, ದಿನಗೂಲಿ ಕಾರ್ಮಿಕರಿಗೆ ಜಾನುವಾರುಗಳಿಗೆ ತೊಂದರೆಯಾಗಿದೆ.

ವಡ್ಡನಹಳ್ಳಿ, ಕ್ಯಾಸಪ್ಪನಹಳ್ಳಿ, ಬಸವಂತಪುರ, ಹೆಡಗಿಮದ್ರಾ, ಮುದ್ನಾಳ, ಠಾಣಗುಂದಿ, ಹೋರುಂಚ, ಅರಿಕೇರಾ (ಬಿ), ಬೊಮ್ಮಚಟ್ಟನಹಳ್ಳಿ, ಯಡ್ಡಳ್ಳಿ, ಸಮಣಾಪುರ, ಕೆ.ಹೊಸಳ್ಳಿ, ಬಂದಳ್ಳಿ, ಹತ್ತಿಕುಣಿ, ಕೋಟಿಗೇರಾ ಕುರುಕುಂದಿ, ಮಾಟನಹಳ್ಳಿ ಗ್ರಾಮಗಳಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.