ADVERTISEMENT

ಯಾದಗಿರಿ | ‘ಧಾರ್ಮಿಕ ಮನೋಭಾವ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 7:25 IST
Last Updated 19 ಏಪ್ರಿಲ್ 2022, 7:25 IST
ಕೆಂಭಾವಿ ಪಟ್ಟಣದ ಹಿರೇಮಠದಲ್ಲಿ ಮಾಸಿಕ ಶಿವಾನುಭವ ಚಿಂತನ ಗೋಷ್ಠಿ ಹಾಗೂ ಧಾರ್ಮಿಕ ಸತ್ಸಂಗ ಕಾರ್ಯಕ್ರಮ ನಡೆಯಿತು
ಕೆಂಭಾವಿ ಪಟ್ಟಣದ ಹಿರೇಮಠದಲ್ಲಿ ಮಾಸಿಕ ಶಿವಾನುಭವ ಚಿಂತನ ಗೋಷ್ಠಿ ಹಾಗೂ ಧಾರ್ಮಿಕ ಸತ್ಸಂಗ ಕಾರ್ಯಕ್ರಮ ನಡೆಯಿತು   

ಕೆಂಭಾವಿ: ‘ಅರಿತರೆ ಶರಣ ಮರೆತರೆ ಮಾನವ’ ಎಂಬ ವಾಕ್ಯದಂತೆ ಧಾರ್ಮಿಕ ಮನೋಭಾವ ಬೆಳೆಯಬೇಕಾದರೆ ಮಠ–ಮಾನ್ಯಗಳಲ್ಲಿ ನಡೆಯುವ ಸತ್ಸಂಗ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಶಿಕ್ಷಕ ಶಿವರುದ್ರಪ್ಪ ಬೊಮ್ಮನಹಳ್ಳಿ ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ಗುರುಶಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಭಾನುವಾರ ನಡೆದ ಮಾಸಿಕ ಶಿವಾನುಭವ ಚಿಂತನ ಗೋಷ್ಠಿ ಹಾಗೂ ಧಾರ್ಮಿಕ ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,‘ನಾನು, ನನ್ನದು ಹಾಗೂ ನನ್ನಿಂದಲೇ ಎಂಬುದನ್ನು ಬಿಟ್ಟು ಶ್ರವಣ, ಮನನ, ನಿಧಿಧ್ಯಾಸನ ಮಾಡಿದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ’ ಎಂದರು.

ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.ರಾಚಯ್ಯಸ್ವಾಮಿ ಮುದನೂರ, ಯಮುನೇಶ ಯಾಳಗಿ, ಶರಣಕುಮಾರ ಯಾಳಗಿ, ನಿಂಗನಗೌಡ ದೇಸಾಯಿ, ಮಹಾದೇವಪ್ಪ ವಜ್ಜಲ, ನಿಜಗುಣಿ ಬಡಿಗೇರ ಹಾಗೂ ಸಂತೋಷ ಇದ್ದರು.

ADVERTISEMENT

ಡಾ.ಯಂಕನಗೌಡ ಪೊಲೀಸ್ ಪಾಟೀಲ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.