ಹುಣಸಗಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ರಚಿಸಲಾಯಿತು.
ಚುನಾವಣೆಯಲ್ಲಿ ಪ್ರಧಾನಿಯಾಗಿ 10ನೇ ತರಗತಿ ವಿದ್ಯಾರ್ಥಿನಿ ಅಂಜಲಿ ಹಾಗೂ ಉಪ ಪ್ರಧಾನಿಯಾಗಿ ದೀಕ್ಷಿತ್ ಆಯ್ಕೆಯಾಗಿದ್ದಾರೆ.
ಭೂಮಿಕಾ, ವರ್ಷಾ, ಸಿಂಧೂ, ಭಾಗ್ಯಶ್ರೀ, ಸೌಜನ್ಯ, ಮುಬಾಷಿರಿನ್, ಪೂಜಾ, ಸುಮಿತ್ರಾ, ಸರಸ್ವತಿ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ವಿಠ್ಠಲ್.ಬಿ.ಚೌಹಾಣ್ ತಿಳಿಸಿದ್ದಾರೆ.
ಶಿಕ್ಷಕಿಯರಾದ ಲಲಿತಾಬಾಯಿ ಮಠ ಹಾಗೂ ಭಾಗ್ಯಶ್ರೀ ಪಾಟೀಲ ಚುನಾವಣೆ ನಡೆಸಿಕೊಟ್ಟರು.
ಶಿಕ್ಷಕರಾದ ಬಸವರಾಜ ತೆಗ್ಗಳ್ಳಿ, ವಿಜಯಲಕ್ಷ್ಮಿ ಕುಂಬಾರ, ಯಂಕನಗೌಡ ಅರಿಕೇರಿ, ಗುರುರಾಜ ಜೋಶಿ, ಮಶಾಕ್ ಯಾಳಗಿ, ನಾಗನಗೌಡ ಪಾಟೀಲ, ಸೋಮನಗೌಡ ಬಳವಾಟ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.