ಯಾದಗಿರಿ: ನಗರದ ಉತ್ತರಾದಿಮಠದ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ವಿಶ್ವಮಧ್ವ ಮಹಾಪರಿಷತ್ತಿನ ವತಿಯಿಂದ ನೂಲಹುಣ್ಣಿಮೆಯ ಅಂಗವಾಗಿ ಸಾಮೂಹಿಕ ಯಜ್ಞಪವಿತ್ರಧಾರಣೆ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ನರಸಿಂಹಾಚಾರ್ಯ ಪುರಾಣಿಕ ಅವರು ಹೋಮ– ಹವನಗಳನ್ನು ನಡೆಸುವ ಮೂಲಕ ನೂತನ ಯಜ್ಞ ಪವಿತ್ರಧಾರಣೆಯನ್ನು ಎಲ್ಲಾ ವಿಪ್ರಬಂಧುಗಳಿಗೆ ಮಾಡಿಸಿದರು.
ಬಳಿಕ ಮಾತನಾಡಿದ ಅವರು, ‘ಉಪನಯನರಾದ ಪ್ರತಿಯೊಬ್ಬರು ಪ್ರತಿ ವರ್ಷ ಈ ಪೂರ್ಣಿಮೆಯಂದು ಬದಲಾವಣೆ ಮಾಡಬೇಕು. ತ್ರಿಕಾಲ ಸಂಧ್ಯಾವಂದನೆ, ಗಾಯತ್ರಿ ಜಪ ಮಾಡಬೇಕು. ದೇವತೆಗಳಿಗೆ ಮತ್ತು ಪಿತೃಗಳಿಗೆ ತರ್ಪಣ ಕೊಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದರ ಜೊತೆಗೆ ಭಗವಂತನ ಪ್ರೀತಿಗೆ ಪಾತ್ರರಾಗಬಹುದು’ ಎಂದರು.
‘ಇಂದಿನ ಒತ್ತಡದ ಬದುಕಿನಲ್ಲಿ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಆಗದೆ, ನಮ್ಮ ಸಂಸ್ಕಾರ ಮತ್ತು ಪರಂಪರೆಯನ್ನು ಮರೆಯುತ್ತಿದ್ದೇವೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ, ಹಿರಿಯರು ತೋರಿದ ಸಂಸ್ಕಾರ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.