ADVERTISEMENT

‘ಸಿದ್ಧಶ್ರೀ’ ಅಗಲಿಕೆಯಿಂದ ನಾಡು ಬರಿದು’

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 4:40 IST
Last Updated 4 ಜನವರಿ 2023, 4:40 IST
ಶಹಾಪುರ ತಾಲ್ಲೂಕಿನ ದೋರನಹಳ್ಳಿಯ ವೀರಮಹಾಂತ ಶಿವಾಚಾರ್ಯರು ಸಿದ್ಧೇಶ್ವರ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು
ಶಹಾಪುರ ತಾಲ್ಲೂಕಿನ ದೋರನಹಳ್ಳಿಯ ವೀರಮಹಾಂತ ಶಿವಾಚಾರ್ಯರು ಸಿದ್ಧೇಶ್ವರ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು   

ಶಹಾಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶಾಸಕರ ಕಚೇರಿ: ಶಾಸಕರ ಕಚೇರಿಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ನುಡಿ ನಮನ ಸಭೆ ಜರುಗಿತು.

ಈ ವೇಳೆ ಮಾತನಾಡಿದ ಶಾಸಕ ಶರಣಬಸಪ್ಪ ದರ್ಶನಾಪುರ, ‘ಸಿದ್ಧೇಶ್ವರ ಸ್ವಾಮೀಜಿಗಳನ್ನು ಕಳೆದುಕೊಂಡ ನಮ್ಮ ನಾಡು ಬರಿದಾಗಿದೆ’ ಎಂದರು.

ADVERTISEMENT

ಮರಿಗೌಡ ಹುಲಕಲ್, ಸೈಯದ್ ಮುಸ್ತಾಫ ದರ್ಬಾನ. ಮಾಹಾದೇವಪ್ಪ ಸಾಲಿಮನಿ, ಶಿವಮಾಂತಪ್ಪ ಚಂದಾಪುರ ಮೌನೇಶ ನಾಟೇಕಾರ. ಮಲ್ಲಯ್ಯ ಸ್ವಾಮಿ ಇಟಗಿ, ರಾಮಣ್ಣ ಸಾದ್ಯಾಪುರ. ಸೈಯದ್ ಇಸ್ಮಾಯಿಲ್ ಚಾಂದ್ ಇದ್ದರು.

ಕಸಾಪ: ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ತಾಲ್ಲೂಕು ಘಟಕದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ವಿಶ್ವಾರಾಧ್ಯ ಸತ್ಯಂಪೇಟೆ, ಸಿದ್ದಲಿಂಗಣ್ಣ ಆನೇಗುಂದಿ, ನೀಲಕಂಠ ಬಡಿಗೇರ,ಭೀಮಣ್ಣ ಅಂಚೆಸೂಗೂರ, ಮೋನಯ್ಯ ಗೋನಾಲ, ಸಣ್ಣ ನಿಂಗಪ್ಪ ನಾಯ್ಕೋಡಿ, ದೇವಿಂದ್ರಪ್ಪ ವಿಶ್ವಕರ್ಮ,ಮಲ್ಲಣ್ಣ ಹೊಸಮನಿ, ಸುರೇಶ ಅರುಣಿ, ಮಲ್ಲಣ್ಣಗೌಡ ಪಾಟೀಲ ಇದ್ದರು.

ದೋರನಹಳ್ಳಿ: ದೋರನಹಳ್ಳಿ ಹಿರೇಮಠದಲ್ಲಿ ವೀರಮಹಾಂತ ಶಿವಾಚಾರ್ಯರು ಸಾನಿಧ್ಯದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಷಣ್ಮುಖಪ್ಪ ಕಕ್ಕೇರಿ, ತಿಪ್ಪಣ್ಣ, ಮಹಾಂತಪ್ಪ ನಂದಿಕೊಲ, ಮಲ್ಲಣ್ಣ ಸುರುಪುರ, ನಿಂಗಣ್ಣಗೌಡ ಲಕ್ಕಶೆಟ್ಟಿ, ಬಸವರಾಜ ಹೊತಪೇಠ, ಸಂಗಣ್ಣ ಹಳ್ಳದ, ಮಹಾಂತೇಶ ಹತ್ತಿಗೂಡುರು, ಮನೋಜ ಕುಂಬಾರ, ಮಹೇಶ್ ಪತ್ತಾರ ಇದ್ದರು.

ನಗರದ ಬಾಪುಗೌಡ ದರ್ಶನಾಪುರ ಸಂಸ್ಥೆಯಲ್ಲಿ, ದೋರನಹಳ್ಳಿ ಡಿಡಿಯು ಶಿಕ್ಷಣ ಸಂಸ್ಥೆಯಲ್ಲಿ ‌ನುಡಿ ನಮನ ಸಲ್ಲಿಸಲಾಯಿತು.

ಶಾಲಾ ಮಕ್ಕಳಿಂದ ಶ್ರದ್ಧಾಂಜಲಿ

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲಾ ಕಾಲೇಜು ಮತ್ತು ಸಂಘ ಸಂಸ್ಥೆಗಳು ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಯುಕೆಪಿ ಕ್ಯಾಂಪ್‌ನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ದಾನಮ್ಮ ದೇವಿ ಸೇವಾ ಸಮಿತಿ ವತಿಯಿಂದ ಸಿದ್ಧೇಶ್ವರ ಶ್ರೀಗಳ ಶ್ರದ್ಧಾಂಜಲಿ ಸಭೆ ನಡೆಯಿತು.

ನಿಮಗದ ಎಇಇ ಮಹಾಲಿಂಗರಾಜು ಹೊಕ್ರಾಣಿ, ಮಹಾಂತೇಶ ಮುರಾಳ, ರವಿ ಕುಮಾರ, ಸುರೇಂದ್ರನ್, ಬಸವರಾಜ ಬೇವೂರ, ವಿರೇಶ, .ಕೆ.ಬಿ.ಪಾಟೀಲ, ಮಲ್ಲಯ್ಯ ಗಣಾಚಾರಿ, ಮಲ್ಲಿಕಾರ್ಜುನ ದೇಸಾಯಿ
ಇದ್ದರು.

ನಮ್ಮ ಕರ್ನಾಟಕ ಸೇನೆ ಸಂಘಟನೆ ತಾಲ್ಲೂಕು ಘಟಕದ ವತಿಯಿಂದ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ವಕ್ತಾರ ಮಲ್ಲಿಕಾರ್ಜುನ ಇಸಾಂಪುರ್, ತಾಲ್ಲೂಕು ಘಟಕದ ಅಧ್ಯಕ್ಷ ಹುಲಗಪ್ಪ ಪಾಳೇಗಾರ, ಬಸವರಾಜ ಕಟ್ಟಿಮನಿ, ವಿಶ್ವನಾಥ ಬಡಿಗೇರ, ಶ್ರೀಶೈಲ್ ಸಜ್ಜನ್, ವೆಂಕಟೇಶ ಇಸಾಂಪುರ ಇದ್ದರು.

ಪಟ್ಟಣದ ಸ್ಪಂದನಾ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮುರಗೆಣ್ಣ ದೇಸಾಯಿ, ಮಲ್ಲಿಕಾರ್ಜುನ ಗುತ್ತೇದಾರ, ವಿನಯ ಜೋಶಿ, ಗುರು ಮಡಿವಾಳರ, ಹಾಗೂ ಶಿಕ್ಷಕರಾದ ಸ್ವಪ್ನ, ಸೌಂದರ್ಯ, ಪಲ್ಲವಿ ಹಾಗೂ ಮಕ್ಕಳು ಇದ್ದರು.

ಮತೋಶ್ರೀ ಶಿಕ್ಷಣ ಸಂಸ್ಥ್ತೆಯ ಪ್ರಾಥಮಿಕ ಶಾಲೆಯಲ್ಲಿ ಅಗಲಿದ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿಲಾಯಿತು. ಬಸವರಾಜಸ್ವಾಮಿ ಸ್ಥಾವರಮಠ, ಶಿವರಾಜ ಸ್ಥಾವರಮಠ, ಶಿಕ್ಷಕರು, ಮಕ್ಕಳು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.