ಯಾದಗಿರಿ: ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಆದೇಶದ ಮೇರೆಗೆ ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಚಿವ ಜಮೀರ್ ಅಹ್ಮದ್ ಅವರು ಮಾಡಿದ ಮನವಿಗೆ ಸ್ಪಂದಿಸಿರುವ ಮುಸ್ಲಿಂ ಸಮಾಜದ ನೂರಾರು ಜನರು ಶುಕ್ರವಾರದ ನಮಾಜ್ ವೇಳೆ ಭಾರತೀಯ ಸೇನೆಗೆ ಹೆಚ್ಚಿನ ಶಕ್ತಿ ಅಲ್ಲಾ ನೀಡಲಿ ಮತ್ತು ಶತ್ರುಗಳ ಕಾಟ ಸಂಪೂರ್ಣ ದಮನವಾಗಲಿ ಎಂದು ಪ್ರಾರ್ಥಿಸಿದರು.
ಇಲ್ಲಿನ ಇಮಾಮ್ ಮಸೀದಿ ಸದರ್ ದರ್ವಾಜಾದಲ್ಲಿ ಸುಮಾರು 400 ಹೆಚ್ಚು ಜನರು ಪ್ರಾರ್ಥನೆಯಲ್ಲಿ ಭಾಗವಹಿದ್ದರು.
ಈ ವೇಳೆ ಮಾತನಾಡಿದ ಮಸೀದಿಯ ಪ್ರಮುಖರಾದ ಮೌಲಾನಾ ನಿಜಾಮೊದ್ದಿನ್ ಅವರು, ಪ್ರತಿಯೊಬ್ಬರಿಗೂ ಅವರವರ ದೇಶವೇ ಮೊದಲು, ನಮಗೆ ನಮ್ಮ ದೇಶವೇ ಅಗ್ರಸ್ಥಾನ. ಹೀಗಾಗಿ ದೇಶದ ಮೇಲೆ, ಜನರ ಮೇಲೆ ದಾಳಿ ಮಾಡುವವರು ಯಾರೇ ಆಗಿರಲಿ, ಅಂಥವರಿಗೆ ತಕ್ಕ ಪಾಠ ಕಲಿಸಬೇಕು. 26 ಜನರನ್ನು ಹತ್ಯೆಗೈದ ಉಗ್ರರ ಕೃತ್ಯ ಖಂಡನೀಯ. ಈಗ ನಮ್ಮ ಕೇಂದ್ರ ಸರ್ಕಾರ, ಭಾರತೀಯ ಸೇನೆ ನಡೆಸುತ್ತಿರುವ ಆಪರೇಷನ್ ಸಿಂಧೂರ ಯಶಸ್ಸಿಯಾಗುತ್ತಿದ್ದು, ಇದಕ್ಕೆ ಇನ್ನಷ್ಟು ಶಕ್ತಿ ಅಲ್ಲಾ ದಯಪಾಲಿಸಲಿ ಮತ್ತು ಶತ್ರುಗಳ ತಂತ್ರ ವಿಫಲವಾಗಲಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.