ಸುರಪುರ: ತಾಲ್ಲೂಕಿನ ದೇವರಗೋನಾಲ ಗ್ರಾಮದಲ್ಲಿ ನಡೆದ ಮೌನೇಶ್ವರ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಗಳು ಜನ ಮನ ಸೂರೆಗೊಂಡವು.
ಬೊಮ್ಮನಳ್ಳಿ, ವನದುರ್ಗ, ಹೋತಪೇಟ, ಗೋಗಿ, ಸಿದ್ದಾಪುರ, ದೋರನಹಳ್ಳಿ, ಶಹಾಪುರ, ಹಳಿಸಗರ, ಮಾಚಗುಂಡಾಳ, ಮಲ್ಲಿಭಾವಿ ಇತರೆಡೆಯಿಂದ ಹಲವು ಜಟ್ಟಿಗಳು ಭಾಗವಹಿಸಿದ್ದರು.
ಬೆಳಿಗ್ಗೆ ಆರಂಭವಾದ ಪಂದ್ಯಗಳು ಸಂಜೆವರೆಗೂ ನಡೆದವು. ಜಟ್ಟಿಗಳ ಸೆಣಸಾಟ, ಪೇಚು ಮನಸೆಳೆದವು. ಸೇರಿದ್ದ ನೂರಾರು ಜನ ಹೋ ಎಂದು ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು.
ಅಂತಿಮವಾಗಿ ದೇವರಗೋನಾಲದ ಶೆಳ್ಳಿಗೆಪ್ಪ ಹಳಿಸಗರ ಮತ್ತು ಗೋಗಿಯ ಭೀಮಣ್ಣ ಮಧ್ಯೆ ರೋಚಕ ಸೆಣಸಾಟ ನಡೆಯಿತು. ಇಬ್ಬರೂ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ.
ಇನ್ನೇನು ಸೋತೆಬಿಟ್ಟರೂ ಎನ್ನುವಷ್ಟರಲ್ಲಿ ಮತ್ತೇ ಪುಟಿದೆದ್ದು ಎದುರಾಳಿಗೆ ಪೆಟ್ಟು ನೀಡುತ್ತಿದ್ದರು. ಇಬ್ಬರೂ ಜಗಜಟ್ಟಿಗಳಂತೆ ಕಾದಾಡಿದರು. ಕೊನೆಗೆ ಗೋಗಿಯ ಭೀಮಣ್ಣ ಗೆಲುವಿನ ನಗೆ ಬೀರಿದರು.
ವಿಜೇತ ಪೈಲ್ವಾನ ಭೀಮಣ್ಣ ಅವರಿಗೆ ಬೆಳ್ಳಿ ಕಡಗ, ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.