ಪ್ರಾತಿನಿಧಿಕ ಚಿತ್ರ
ಸುರಪುರ: ನಗರದ ಬೀದಿನಾಯಿಗಳನ್ನು ಹಿಡಿದು ಆಹಾರ, ನೀರು ಇಲ್ಲದ ಅಡವಿಯಲ್ಲಿ ಬಿಟ್ಟು ಅವುಗಳ ಸಾವಿಗೆ ಕಾರಣವಾಗಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಮಾಜ ಸೇವಕಿ ನವ್ಯ ಎಂ. ಕರಡಕಲ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮತ್ತು ರೇಬಿಸ್ ವ್ಯಾಕ್ಸಿನೇಶನ್ ಮಾಡಿ, ಅವು ವಾಸಿಸುವ ಜಾಗಕ್ಕೆ ಬಿಡಲು ಆದೇಶವಿರುತ್ತದೆ. ಆದರೆ, ನಿಯಮ ಪಾಲಿಸದೆ ನಗರಸಭೆ ಅಧಿಕಾರಿಗಳು ನಾಯಿಗಳನ್ನು ಹಿಡಿಯಲು ಏಜನ್ಸಿಯವರಿಗೆ ನೀಡಿ ಅವುಗಳನ್ನು ಸ್ಥಳಾಂತರಿಸಲು ಸೂಚಿಸಿರುತ್ತಾರೆ. ಏಜನ್ಸಿಯವರು ಅವುಗಳನ್ನು ಹಿಡಿದುಕೊಂಡು ಹೋಗಿ ನೀರು, ಆಹಾರ ಸಿಗದ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಇದರಿಂದ ಅನೇಕ ನಾಯಿಗಳು ಸಾವನ್ನಪ್ಪಿವೆ. ಇದಕ್ಕೆ ನಗರಸಭೆ ಅಧಿಕಾರಿಗಳು ಕಾರಣರಾಗಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಬೀದಿ ನಾಯಿಗಳನ್ನು ಹಿಡಿಯುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.