ADVERTISEMENT

ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ವಹಿಸಿ: ಡಾ.ರತ್ನಾಕರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:23 IST
Last Updated 18 ಜುಲೈ 2024, 14:23 IST
ನಾರಾಯಣಪುರದ ಕೆಬಿಜೆಎನ್ಎಲ್ ಮಲೇರಿಯಾ ನಿಯಂತ್ರಣ ಘಟಕದ ವತಿಯಿಂದ ಗುರುವಾರ  ಸೊಳ್ಳೆ ನಿಯಂತ್ರಕ ಲ್ಯಾಂಬ್ಡೊ ಸೈಕ್ಲೋತ್ರೀನ್ ಔಷಧ ಸಿಂಪಡಣೆ ಮಾಡಲಾಯಿತು
ನಾರಾಯಣಪುರದ ಕೆಬಿಜೆಎನ್ಎಲ್ ಮಲೇರಿಯಾ ನಿಯಂತ್ರಣ ಘಟಕದ ವತಿಯಿಂದ ಗುರುವಾರ  ಸೊಳ್ಳೆ ನಿಯಂತ್ರಕ ಲ್ಯಾಂಬ್ಡೊ ಸೈಕ್ಲೋತ್ರೀನ್ ಔಷಧ ಸಿಂಪಡಣೆ ಮಾಡಲಾಯಿತು   

ನಾರಾಯಣಪುರ: ಇಲ್ಲಿನ ಕೆಬಿಜೆಎನ್ಎಲ್ ಮಲೇರಿಯಾ ನಿಯಂತ್ರಣ ಘಟಕ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುವಾರ ಸಾಂಕ್ರಾಮಿಕ ರೋಗ ಹರಡದಂತೆ ಸೊಳ್ಳೆ ನಿಯಂತ್ರಕ ಲ್ಯಾಂಬ್ಡೊ ಸೈಕ್ಲೋತ್ರೀನ್ ಔಷಧ ಸಿಂಪಡಣೆಗೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಘಟಕದ ಆರೋಗ್ಯ ಅಧಿಕಾರಿ ಡಾ. ರತ್ನಾಕರ, ಪ್ರಸ್ತುತ ಮಳೆಗಾಲ ಆಗಿರುವುದರಿಂದ ಎಲ್ಲೆಂದರಲ್ಲಿ ನೀರು ನಿಲ್ಲುತ್ತದೆ. ಇಂತಹ ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮನುಷ್ಯರಿಗೆ ಸೊಳ್ಳೆ ಕಡಿತದಿಂದ ಮಲೇರಿಯಾ, ಡೆಂಗಿ, ಟೈಪಾಯ್ಡ್‌ ನಂತಹ  ಮಾರಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹೀಗಾಗಿ ರೋಗಗಳು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಔಷಧ ಸಿಂಪಡಣೆ ಮಾಡಿಸಿಕೊಳ್ಳಿ. ಜನವಸತಿ ಗೃಹಗಳ ಆವರಣದಲ್ಲಿ ನೀರು ನಿಲ್ಲದಂತೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ  ಇಟ್ಟುಕೊಳ್ಳವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ. ಒಂದೊಮ್ಮೆ ಜ್ವರ ಪ್ರಕರಣ ಕಂಡು ಬಂದರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ADVERTISEMENT
ಚಿತ್ರ18ಎನ್ಆರ್ಪಿ01ನಾರಾಯಣಪುರ ಇಲ್ಲಿನ ಕೆಬಿಜೆಎನ್ಎಲ್ ಮಲೇರಿಯಾ ನಿಯಂತ್ರಣ ಘಟಕ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುವಾರ ಆರೋಗ್ಯ ಅಧಿಕಾರಿಗಳು ಸಾಂಕ್ರಾಮಿಕ ರೋಗ ಹರಡದಂತೆ ಸೊಳ್ಳೆನಿಯಂತ್ರಕ ಲ್ಯಾಂಬ್ಡೊ ಸೈಕ್ಲೋತ್ರೀನ್ ಔಷದಿ ಸಿಂಪಡನೆಗೆ ಚಾಲನೆ ನೀಡಿದರು..

ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಯ್ಯಾಳಪ್ಪ, ಆರ್.ಜೆ.ರಘು, ಬಸವರಾಜ ದೊಡ್ಡಮನಿ, ಸಂತೋಶ ಜೋಗಿ, ಸಂತೋಷ ಪೂಜಾರಿ, ಶ್ರೀಕಾಂತ, ಮಲ್ಲಿಕಾರ್ಜುನ ಕುದರೆಕರ, ಮಲ್ಲಿಕಾರ್ಜುನ ಯಾಳಗಿ, ಬಾಲರಾಜ ದೇವಣ್ಣ, ಅಜಯಕುಮಾರ, ಎಂ.ಆರ್‌. ಮುದ್ನಾಳ, ಶಿವಾನಂದ ಗಂಜಾಳ, ಎಂ. ಹಂಡೆಬಾಗ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.