ADVERTISEMENT

‘ಪ್ರತಿಭೆಗೆ ಬಡತನ ಅಡ್ಡಿಯಾಗದು’

​ಪ್ರಜಾವಾಣಿ ವಾರ್ತೆ
Published 22 ಮೇ 2022, 2:17 IST
Last Updated 22 ಮೇ 2022, 2:17 IST
ಹುಣಸಗಿ ಪಟ್ಟಣದ ಅಮ್ಮನ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಭರತ್ ಕುಮಾರಗೆ ₹25 ಸಾವಿರ ಪ್ರತಿಭಾ ಪುರಸ್ಕಾರ ನೀಡಲಾಯಿತು
ಹುಣಸಗಿ ಪಟ್ಟಣದ ಅಮ್ಮನ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಭರತ್ ಕುಮಾರಗೆ ₹25 ಸಾವಿರ ಪ್ರತಿಭಾ ಪುರಸ್ಕಾರ ನೀಡಲಾಯಿತು   

ಹುಣಸಗಿ: ‘ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಒರೆಗೆ ಹಚ್ಚಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದು ಉದ್ಯಮಿ ಎಸ್‌.ಪಿ.ದಯಾನಂದ ಹೇಳಿದರು.

ಪಟ್ಟಣದ ಅಮ್ಮನ ಮನೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.‌ ಮುಖಂಡ ಅಮರೇಶ ಬಸನಗೌಡ್ರ ಮಾತನಾಡಿ, ಉತ್ತಮ ಕಾರ್ಯವನ್ನು ಶ್ಲಾಘಿಸಿದರು.

ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿ ಭರತ್ ಕುಮಾರ ಹಿರೇಮಠ ಕಕ್ಕೇರಾ ಅವರು ಉಚಿತ ವೈದ್ಯಕೀಯ ಕೋರ್ಸ್‌ಗೆ ಆಯ್ಕೆಯಾದ್ದರಿಂದ ₹25 ಸಾವಿರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಶ್ರೇಯಾನ್, ಬಸವರಾಜ ಪಡುಕೋಟೆ, ಈಶ್ವರಪ್ಪ ಶ್ರೀಗಿರಿ, ಸಂತೋಷ ಹುಂಡೇಕಾರ, ಬಸಯ್ಯ ಹಿರೇಮಠ, ಬಸನಗೌಡ ಬಾಗೇವಾಡಿ, ಆನಂದ ಮಧೋಳ, ಎಸ್ಪಿ. ಆನಂದ, ಯಲ್ಲು ದೊರೆ, ಭೀಮಶೇನರಾವ್ ಕುಲಕರ್ಣಿ, ಮಹಾಂತೇಶ ಹೊಗರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.