ADVERTISEMENT

ವಜ್ಜಲ: ತಿಮ್ಮಪ್ಪಯ್ಯ ಶರಣರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 6:24 IST
Last Updated 27 ಮಾರ್ಚ್ 2023, 6:24 IST
ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ತಿಮ್ಮಪ್ಪಯ್ಯ ಮುತ್ಯಾ ಜಾತ್ರಾ ಮಹೋತ್ಸವ ಭಾನುವಾರ ರಥೋತ್ಸವ ಜರುಗಿತು
ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ತಿಮ್ಮಪ್ಪಯ್ಯ ಮುತ್ಯಾ ಜಾತ್ರಾ ಮಹೋತ್ಸವ ಭಾನುವಾರ ರಥೋತ್ಸವ ಜರುಗಿತು   

ಹುಣಸಗಿ: ತಾಲ್ಲೂಕಿನ ವಜ್ಜಲ ಗ್ರಾಮದ ಶಿವಶರಣ ತಿಮ್ಮಪ್ಪಯ್ಯ ಮುತ್ಯಾ ಜಾತ್ರಾ ಮಹೋತ್ಸವ ಭಾನುವಾರ ಸಡಗರ ಸಂಭ್ರಮದಿಂದ ನಡೆಯಿತು.

ಭಾನುವಾರ ಬೆಳಿಗ್ಗೆ ಸುಪ್ರಭಾತ, ಕತೃ ಗದ್ದುಗೆಗೆ ಪಂಚಾಮೃತ ಅಭೀಷೇಕ ನಡೆಯಲಿದೆ. ಕಳಸ ಹಾಗೂ ಬೆಳ್ಳಿಯ ಕವಚ ಗಂಗಾಸ್ನಾನ, ಮಹಾಪೂಜೆ ನಡೆಯಲಿದೆ.

ಸಂಜೆ 6 ಗಂಟೆಗೆ ಬಂಡೆಪ್ಪನಳ್ಳಿ ಪೂಜ್ಯರು, ಬಸವರಾಜ ಮುತ್ಯಾ ನಾವದಗಿ ಹಾಗೂ ಯಲ್ಲಣ್ಣ ಮುತ್ಯಾ ಮಾಳನೂರು ಅವರ ನೇತೃತ್ವದಲ್ಲಿ ರಥೋತ್ಸವ ನಡೆಯಿತು.

ADVERTISEMENT

ಐದು ದಿನಗಳವರೆಗೆ ದೇವಸ್ಥಾನ ಸಮೀತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸಂಜೆ ನಡೆದ ರಥೋತ್ಸವದಲ್ಲಿ ಗ್ರಾಮದ ಹಿರಿಯರಾದ ರಾಜಶೇಖರ ಗೌಡ ಪಾಟೀಲ, ಸಂಗನಗೌಡ ಪೊಲೀಸ್ ಪಾಟೀಲ, ಎಸ್.ಪಿ.ದಯಾನಂದ, ಮೋಹನ ಕುಲರ‍್ಣಿ, ಕರೆಪ್ಪ ವಜ್ಜಲ, ಗ್ರಾ.ಪಂ ಅಧ್ಯಕ್ಷ ಶಿವನಗೌಡ ಪಾಟೀಲ, ಅಮರೇಶ ಬಸನಗೌಡ್ರ, ಬಸಯ್ಯ ಹಿರೇಮಠ ಸೇರಿದಂತೆ ಇತರರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.