ADVERTISEMENT

ಬಿರುಗಾಳಿ, ಮಳೆಗೆ ಧರೆಗುರುಳಿದ ಮರಗಳು, ತಾರಸಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 13:27 IST
Last Updated 27 ಏಪ್ರಿಲ್ 2025, 13:27 IST
ಸೈದಾಪುರ ಪಟ್ಟಣದ ಹೊರವಲಯದ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದೆ
ಸೈದಾಪುರ ಪಟ್ಟಣದ ಹೊರವಲಯದ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದೆ   

ಸೈದಾಪುರ: ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆಗೆ ಜನ ಸಂಕಷ್ಟ ಅನುಭವಿಸಿದರು.

ಬಸ್ ನಿಲ್ದಾಣದ ಹತ್ತಿರವಿರುವ ಅಂಗಡಿ, ಡಿಡಿಯು ಶಾಲೆಯ ಶೌಚಾಲಯದ ಮೇಲ್ಛಾವಣಿಯ ಪತ್ರಾಸ್‌ಗಳು ಹಾರಿ ಬಿದ್ದಿವೆ. ಸೈದಾಪುರ– ಯಾದಗಿರಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದು, ಕೆಲ ಕಾಲ ವಾಹನ ಸವಾರರು ತೊಂದರೆ ಉಂಟಾಯಿತು.

ಬಿರುಗಾಳಿಗೆ ಹೊಲಗಳಲ್ಲಿನ ಕೆಲವು ವಿದ್ಯುತ್ ಕಂಬಗಳು ನೆಲಕ್ಕೆ ವಾಲಿವೆ. ಭಾರಿ ಪ್ರಮಾಣದ ಬಿರುಗಾಳಿಗೆ ಪಟ್ಟಣದ ತುಂಬೆಲ್ಲ ಧೂಳು ತುಂಬಿಕೊಂಡು ಮನೆ, ವಾಹನ, ಜನರ ಮುಖ ಕಾಣದಂಥ ವಾತಾವರಣ ನಿರ್ಮಾಣವಾಗಿತ್ತು. ಕೆಲ ಕಾಲ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಅಂಗಡಿ ಮಾಲೀಕರು ಅಂಗಡಿಗಳ ಬಾಗಿಲಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂತು.

ADVERTISEMENT

ಬಸವೇಶ್ವರ ವೃತ್ತದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿನ ಬೀದಿ ಬದಿಯ ವ್ಯಾಪಾರಿಗಳು ಕೆಲ ಕಾಲ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿ ಗಂಟು ಮೂಟೆ ಕಟ್ಟಿ ಬೇರೆ ಕಡೆ ಹೋಗಿ ಕುಳಿತುಕೊಂಡರು. ಬಸ್ ನಿಲ್ದಾಣದ ಹತ್ತಿರ ರಸ್ತೆ ಮೇಲೆ ಮಳೆ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.