ADVERTISEMENT

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಬಾಲಕಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 3:34 IST
Last Updated 21 ಡಿಸೆಂಬರ್ 2020, 3:34 IST
ಸುರಪುರ ತಾಲ್ಲೂಕಿನ ಪರಸನಹಳ್ಳಿಯ ಎರಡು ವರ್ಷ ಐದು ತಿಂಗಳ ಪುಟಾಣಿ ಬಾಲಕಿ ಪ್ರತೀಕ್ಷಾ ಬಿರಾದಾರ
ಸುರಪುರ ತಾಲ್ಲೂಕಿನ ಪರಸನಹಳ್ಳಿಯ ಎರಡು ವರ್ಷ ಐದು ತಿಂಗಳ ಪುಟಾಣಿ ಬಾಲಕಿ ಪ್ರತೀಕ್ಷಾ ಬಿರಾದಾರ   

ಯಾದಗಿರಿ: ಎರಡು ವರ್ಷ ಐದು ತಿಂಗಳ ಪುಟಾಣಿ ಬಾಲಕಿ ಪ್ರತೀಕ್ಷಾ ಬಿರಾದಾರ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾಳೆ. ಈ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.

ಜಿಲ್ಲೆಯ ಸುರಪುರ ತಾಲ್ಲೂಕಿನ ಪರಸನಹಳ್ಳಿಯ ಶಾಂತಗೌಡ ಮತ್ತು ವಿದ್ಯಾಶ್ರೀ ದಂಪತಿ ಮಗಳಾದ ಪ್ರತೀಕ್ಷಾ ಬಿರಾದಾರ ಚಿಕ್ಕ ವಯಸ್ಸಿನಲ್ಲಿಯೇ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾಳೆ.

ಭಾರತದ ರಾಜಧಾನಿಗಳು, ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಸುಮಾರು 50 ಶಬ್ದಗಳು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರುಗಳನ್ನು ಪಟಪಟನೆ ಹೇಳುತ್ತಾಳೆ. ರಾಜ್ಯದ ಎಲ್ಲ ಮುಖ್ಯಮಂತ್ರಿಗಳ ಹೆಸರು ಹೇಳುತ್ತಾಳೆ. ಸ್ವಾತಂತ್ರ್ಯ ಭಾರತದ ವೀರ ಮಹಿಳೆಯರ ಹೆಸರು, ಸಾಕುಪ್ರಾಣಿಗಳು, ಕಾಡು ಪ್ರಾಣಿಗಳು, ವಾಹನಗಳು, ದೇಹದ ಭಾಗಗಳು, ಭಾರತದ ಚಿಹ್ನೆಗಳು, ಹೂಗಳು, ತರಕಾರಿಗಳು ಹಣ್ಣುಗಳು, ಪ್ರಮುಖ ವ್ಯಕ್ತಿಗಳನ್ನು ಗುರುತಿಸುತ್ತಾಳೆ.

ಪ್ರತೀಕ್ಷಾ ಬಿರಾದಾರ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಗೆ ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್ ಮತ್ತು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾಳೆ. ಚಿಕ್ಕ ವಯಸ್ಸಿನ ಮಕ್ಕಳ ಬುದ್ಧಿಶಕ್ತಿ ಗಮನಿಸಿ ಈ ಸಂಸ್ಥೆಗಳು ಪ್ರಶಸ್ತಿ ನೀಡಿವೆ.ಮುಂದೆ ಜಿಲ್ಲಾಧಿಕಾರಿ ಆಗಬೇಕೆಂಬ ಆಸೆ ಹೊಂದಿದ್ದಾಳೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.