ADVERTISEMENT

ಬುರ್ಹಾನುದ್ದೀನ್ ಉರುಸ್ ಸಂಪನ್ನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 7:15 IST
Last Updated 8 ಫೆಬ್ರುವರಿ 2023, 7:15 IST
ಸುರಪುರದಲ್ಲಿ ಹಜರತ್ ಬುರ್ಹಾನುದ್ದೀನ್ ಶಾ ಖಾದ್ರಿ ಉರುಸ್ ಅಂಗವಾಗಿ ಸಂದಲ್ ಮೆರವಣಿಗೆ ನಡೆಯಿತು
ಸುರಪುರದಲ್ಲಿ ಹಜರತ್ ಬುರ್ಹಾನುದ್ದೀನ್ ಶಾ ಖಾದ್ರಿ ಉರುಸ್ ಅಂಗವಾಗಿ ಸಂದಲ್ ಮೆರವಣಿಗೆ ನಡೆಯಿತು   

ಸುರಪುರ: ವೆಂಕಟಾಪುರದ ತಪ್ಪಲು ಪ್ರದೇಶದಲ್ಲಿರುವ ಹಜರತ್ ಬುರ್ಹಾನುದ್ದೀನ್ ಶಾ ಖಾದ್ರಿ ಅವರ ಉರುಸ್ ಸಂಭ್ರಮದಿಂದ ನಡೆಯಿತು.

ಶುಕ್ರವಾರ ರಾತ್ರಿ ಬಸ್‍ನಿಲ್ದಾಣದ ಹತ್ತಿರ ಇರುವ ಹಜರತ್ ಫಕ್ರುಲ್ಲಾ ಶಾ ಖಾದ್ರಿ ದರ್ಗಾದಿಂದ ವೆಂಕಟಾಪುರದವರೆಗೆ ಸಂದಲ್ ಮೆರವಣಿಗೆ ನಡೆಯಿತು. ಸಜ್ಜಾದ್ ಏ ನಶೀನ್ ಹಜರತ್ ಸೈಯದ್ ಇರ್ಫಾನ್ ಅಲಿ ಶಾ ಖಾದ್ರಿ ಗಂಧ ಲೇಪನ ಮಾಡಿದರು. ಶನಿವಾರ ಗಲೀಫ್ ಅರ್ಪಣೆ, ದೀಪಾರಾಧನೆ ನಡೆಯಿತು. ರಾತ್ರಿಯಿಡಿ ಕವ್ವಾಲಿ ಏರ್ಪಡಿಸಲಾಗಿತ್ತು. ಭಾನುವಾರ ಜಿಯಾರತ್‍ನೊಂದಿಗೆ ಉರುಸ್ ಸಂಪನ್ನವಾಯಿತು.

ಇರ್ಫಾನ್ ಅಲಿ ಶಾ ಖಾದ್ರಿ, ‘ಬುರ್ಹಾನುದ್ದೀನ್ ಶಾ, ಮೂರು ಶತಮಾನಗಳ ಹಿಂದೆ ಧರ್ಮ ಪ್ರಚಾರಕ್ಕೆ ಸುರಪುರಕ್ಕೆ ಬರುತ್ತಾರೆ. ತಮ್ಮ ಕೊನೆಯ ದಿನಗಳನ್ನು ಇಲ್ಲಿಯೇ ಕಳೆಯುತ್ತಾರೆ. ದೈವಾಂಶ ಸಂಭೂತರಾದ ಅವರು ಭಕ್ತರನ್ನು ಹರಸುತ್ತಿದ್ದಾರೆ. ಅವರ ಮಂತ್ರ ಶಕ್ತಿಯಿಂದ ನಿರ್ಮಾಣವಾದ ದರ್ಗಾದ ಪಕ್ಕದಲ್ಲಿರುವ ಬಾವಿಯ ನೀರು ಅಮೃತ ಸಮಾನವಾಗಿದೆ’
ಎಂದರು.

ADVERTISEMENT

ಸಂಸ್ಥಾನಿಕ ರಾಜಾ ಲಕ್ಷ್ಮೀನಾರಾಯಣನಾಯಕ, ವತನದಾರ ಉಸ್ತಾದ ವಜಾಹತ್ ಹುಸೇನ್, ರಾಜಾ ವೇಣುಗೋಪಾಲನಾಯಕ, ವೆಂಕೋಬ ದೊರೆ, ಸೈಯದ್ ಜಾಕೀರ್ ಹುಸೇನ್, ಸೋಪಿ ಶರ್ಮತ್, ಮಹೆಬೂಬ ಖಾನ್, ಖಾಲಿದ ಗಂಗಾವತಿ, ರಂಗನಾಥ, ಮಹ್ಮದ್ ಮೋಯಿಜ್, ಮಹ್ಮದ್ ಹುಸೇನ್, ಕಲಿಂ ಸೌದಾಗರ, ಮೋಹಸಿನ್ ಸೌದಾಗರ, ಮಹ್ಮದ್ ಸಮೀರ್, ಮಹ್ಮದ್ ಖಾದರಭಾಷಾ
ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.