ADVERTISEMENT

ಬಸ್ ನಿಲ್ದಾಣದಲ್ಲಿ ಕುಳಿತಿದ್ದ ವೃದ್ಧೆಗೆ ತಗುಲಿದ ಕಬ್ಬಿಣದ ಫಲಕ: ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 15:56 IST
Last Updated 18 ಏಪ್ರಿಲ್ 2025, 15:56 IST
18 ವೈಡಿಜಿ1 ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತ ವೃದ್ಧೆಗೆ ಶುಕ್ರವಾರ ಸಾಯಂಕಾಲ ಬಿಸಿದ ಬಿರುಗಾಳಿಗೆ ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದ ಸೂಚನಾ ಫಲಕ ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿರುವದು
18 ವೈಡಿಜಿ1 ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತ ವೃದ್ಧೆಗೆ ಶುಕ್ರವಾರ ಸಾಯಂಕಾಲ ಬಿಸಿದ ಬಿರುಗಾಳಿಗೆ ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದ ಸೂಚನಾ ಫಲಕ ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿರುವದು   

ವಡಗೇರಾ: ಶುಕ್ರವಾರ ಸಂಜೆ ಬಿಸಿದ ಬಿರುಗಾಳಿ ಪರಿಣಾಮ ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದ ಸೂಚನಾ ಫಲಕ ತಲೆಗೆ ಬಡಿದು ವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಲ್ಲೂಕಿನ ಕಾಡಂಗೇರಾ(ಬಿ) ಗ್ರಾಮದ ಮಹಿಳೆ ನಿಂಗಮ್ಮ ನಿಂಗಪ್ಪ ದೇವಕಮ್ಮನೋರ ಕೆಲಸದ ನಿಮಿತ್ತ ಯಾದಗಿರಿಗೆ ಬಂದಿದ್ದರು. ಕೆಲಸವನ್ನು ಮುಗಿಸಿ ಊರಿಗೆ ಮರಳಲು ಸಂಜೆ ಬಸ್ ನಿಲ್ದಾಣಕ್ಕೆ ಬಂದಿದ್ದರು. ಸಂಜೆ 5ಗಂಟೆ ಸುಮಾರಿಗೆ ಜೋರಾಗಿ ಬಿಸಿದ ಬಿರುಗಾಳಿಗೆ ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದ ಸೂಚನಾ ಫಲಕ ಹಾರಿ ಬಂದು ತಲೆಗೆ ಬಡಿದಿದೆ. ಇದರಿಂದ ರಕ್ತಸ್ರಾವದಿಂದ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದರು. 

ಸಕಾಲದಲ್ಲಿ ಬಾರದ ಅಂಬುಲೆನ್ಸ್: ಬಸ್ ನಿಲ್ಧಾಣದಲ್ಲಿ ಇದ್ದ ಪ್ರಯಾಣಿಕರು ಕರೆ ಮಾಡಿದರೂ ಸಕಾಲದಲ್ಲಿ ಅಂಬುಲೆನ್ಸ್‌ ಬಾರದೆ ಇರುವದರಿಂದ ಬಸ್‌ನಲ್ಲೇ ಗಾಯಾಳು ವೃದ್ಧೆಯನ್ನು ಸಾರಿಗೆ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋದರು.


ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.