
ವಂಕಸಂಬ್ರ(ಸೈದಾಪುರ): ಸಮೀಪದ ವಂಕಸಂಬ್ರ ಗ್ರಾಮದ ವಿಶ್ವನಾಥ ಶೆಟ್ಟಿ ಅವರ ಕಿರಾಣಿ ಅಂಗಡಿ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಅಂಗಡಿ ಸುಟ್ಟು ಭಸ್ಮವಾದ ಘಟನೆ ಬುಧವಾರ ಸಂಭವಿಸಿದೆ.
ಗ್ರಾಮದ ಬ್ರಹ್ಮಂಗಾರು ದೇವಸ್ಥಾನದ ಹತ್ತಿರವಿರುವ ಹರಿಹರ ನಾಯಕ ಕಿರಾಣಿ ಮತ್ತು ಜನರಲ್ ಸ್ಟೋರ್‌ನಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 3.30 ರಿಂದ 4 ಗಂಟೆ ವೇಳೆಗೆ ವಿದ್ಯುತ್ ಶಾರ್ಟ್‌ಸರ್ಕಿಟ್‌ನಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿಟ್ಟಿದ್ದ ₹ 55 ಸಾವಿರ ನಗದು, ಸುಮಾರು ₹ 1.5 ಲಕ್ಷಕ್ಕೂ ಅಧಿಕ ಕಿರಾಣಿ ಸಾಮಾನು, ರೆಫ್ರಿಜೀರೇಟರ್, ₹ 50 ಸಾವಿರ ಮೌಲ್ಯದ ಅಂಗಡಿ ಸೇರಿದಂತೆ ಸುಮಾರು ₹ 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಸುಟ್ಟ ಕರಕಲಾಗಿವೆ. ಇದರಿಂದ ಅಂಗಡಿಯ ಮಾಲಿಕರಿಗೆ ಭರಿಸಲಾರದಷ್ಟು ನಷ್ಟವಾಗಿದೆ. ಅಂಗಡಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬವನ್ನು ಇದೀಗ ಸಾಲದ ಸಂಕಷ್ಟಕ್ಕೆ ದೂಡಿದೆ. ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರರು ಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯಧನದ ವ್ಯವಸ್ಥೆ ಮಾಡಿದರೆ ಅನೂಕೂಲವಾಗುತ್ತದೆ ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ನಿಜಲಿಂಗಪ್ಪ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.