ADVERTISEMENT

ಯಾದಗಿರಿ: 151 ಜನರಿಗೆ ಕೋವಿಡ್‌ ದೃಢ

582 ಕೋವಿಡ್‌ ಸಕ್ರಿಯ ಪ್ರಕರಣ, 35 ಜನ ಗುಣಮುಖ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 14:39 IST
Last Updated 23 ಜನವರಿ 2022, 14:39 IST

ಯಾದಗಿರಿ: ಜಿಲ್ಲೆಯಲ್ಲಿ ಭಾನುವಾರ 151 ಜನರಿಗೆ ಕೋವಿಡ್‌ ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 582ಕ್ಕೆ ಏರಿಕೆಯಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ 59, ಗುರುಮಠಕಲ್‌ ತಾಲ್ಲೂಕಿನಲ್ಲಿ 10, ಶಹಾಪುರ ತಾಲ್ಲೂಕಿನಲ್ಲಿ 38, ವಡಗೇರಾ ತಾಲ್ಲೂಕಿನಲ್ಲಿ 4, ಸುರಪುರ ತಾಲ್ಲೂಕಿನಲ್ಲಿ 23, ಹುಣಸಗಿ ತಾಲ್ಲೂಕಿನಲ್ಲಿ 17 ಸೇರಿದಂತೆ ಒಟ್ಟಾರೆ 151 ಜನರಿಗೆ ಕೋವಿಡ್‌ ಇರುವುದು ಪತ್ತೆಯಾಗಿದೆ.

ಹೋಂ ಐಸೊಲೇಷನ್‌ಲ್ಲಿದ್ದ 33 ಜನ, ಆಸ್ಪತ್ರೆಯಲ್ಲಿದ್ದ 2 ಸೇರಿದಂತೆ 35 ಜನರು ಗುಣಮುಖರಾಗಿದ್ದಾರೆ. ಯಾದಗಿರಿ ತಾಲ್ಲೂಕಿನಲ್ಲಿ 18, ಶಹಾಪುರ ತಾಲ್ಲೂಕಿನಲ್ಲಿ 9, ವಡಗೇರಾ ತಾಲ್ಲೂಕಿನಲ್ಲಿ 1, ಸುರಪುರ ತಾಲ್ಲೂಕಿನಲ್ಲಿ 5 ಜನ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

ADVERTISEMENT

0 ಯಿಂದ 5 ವರ್ಷದೊಳಗಿನ 2 ಇಬ್ಬರು ಮಕ್ಕಳು, 6ರಿಂದ 10 ವರ್ಷದೊಳಗಿನ 4, 11ರಿಂದ 18 ವರ್ಷದೊಳಗಿನ 21, 19ರಿಂದ 35 ರೊಳಗಿನ 66, 36ರಿಂದ 55 ವರ್ಷದೊಳಗಿನ 40, 55 ವರ್ಷ ಮೇಲಟ್ಟ 18 ಜನ ಸೇರಿ 151 ಜನರಿಗೆ ಕೋವಿಡ್‌ ದೃಢಪಟ್ಟಿದೆ.

****

ಯಾದಗಿರಿ ಕೋವಿಡ್‌ ಅಂಕಿ ಅಂಶ ( ಜನವರಿ 23)
ಒಟ್ಟು ಸೋಂಕಿತರು; 28,250
ಸಕ್ರಿಯ ಪ್ರಕರಣ: 582
ಗುಣಮುಖ ಆದವರು; 27,462
ಒಟ್ಟು ಸಾವು;206
ದಿನದ ಏರಿಕೆ
ಹೊಸ ಪ್ರಕರಣ;151
ಗುಣಮುಖ;35
ಸಾವು;0
ಆಧಾರ: ಆರೋಗ್ಯ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.