ADVERTISEMENT

ಯಾದಗಿರಿ‌| ಜಿಲ್ಲೆಯಾದ್ಯಂತ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ರಾಧೆ, ಕೃಷ್ಣ ವೇಷ ಧರಿಸಿದ ಮುದ್ದು ಮಕ್ಕಳು, ಶಾಲೆಗಳಲ್ಲೂ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:24 IST
Last Updated 19 ಆಗಸ್ಟ್ 2022, 15:24 IST
ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು
ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಲ್ಲಿ ಶುಕ್ರವಾರ ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಭಕ್ತಿಯ ಸೇವೆ ಮತ್ತು ಆಚರಣೆಗಳು ಕಂಡುಬಂದವು.

ವಿವಿಧೆಡೆ ಮಕ್ಕಳನ್ನು ಕೃಷ್ಣ, ರಾಧೆಯರ ವೇಷಗಳನ್ನು ತೊಡಿಸಿ ಸಂಭ್ರಮಿಸಲಾಗಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸೇವೆಗಳನ್ನು ಮಾಡಲಾಗಿದೆ.

ಜಿಲ್ಲಾಡಳಿತ: ನಗರದ ಜಿಲ್ಲಾಡಳಿತದ ಅಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಶ್ರೀಕೃಷ್ಣ ಜಯಂತ್ಯೋತ್ಸವ ಸಮಿತಿಯ ಸಹಯೋಗದಲ್ಲಿ ಶುಕ್ರವಾರ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ADVERTISEMENT

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರಾಂಶುಪಾಲ ಶುಭಾಶ್ಚಂದ್ರ ಕೌಲಗಿ, ಕೃಷ್ಣನು ಜನ ಮಾನಸ ದೈವೀಪುರುಷನಾಗಿ ಸ್ಮರಿಸುತ್ತಿದೆ. ಪಾಂಡವರ ಭಕ್ತಿಯನ್ನು ಮೆಚ್ಚಿದ ಕೃಷ್ಣ ಕುರುಕ್ಷೇತ್ರ ಯುದ್ಧದಲ್ಲಿ ಧರ್ಮದ ಗೆಲುವಿಗೆ ಕಾರಣನಾಗಿದ್ದಾನೆ. ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಯಿಂದ ಮತ್ತು ಹಲವು ಲೀಲೆಗಳಿಂದ ಜನ ಮಾನಸದಲ್ಲಿ ಶಾಸ್ವತ ಸ್ಥಾನ ಆತನಿಗಿದೆ ಎಂದರು.

ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಮಾತನಾಡಿ, ಯಾದವ ಸಮಾಜದ ಸಮುದಾಯ ಭವನಕ್ಕಾಗಿ ಅವಶ್ಯಕ ನಿವೇಶನದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರುದ್ರುಗೌಡ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟೆಪ್ಪಗೋಳ, ಯಾದವ ಸಮಾಜದ ಅಧ್ಯಕ್ಷ ತಾಯಪ್ಪ ಯಾದವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ ಸೇರಿದಂತೆ ಯಾದವ ಸಮಾಜದ ಮುಖಂಡರು ಇದ್ದರು.

‘ಕೃಷ್ಣನ ತತ್ವಗಳು ಶ್ರೇಷ್ಠ’

ಸುರಪುರ: ‘ಕೃಷ್ಣ ಪರಮಾತ್ಮನ ತತ್ವಾದರ್ಶಗಳು ಶ್ರೇಷ್ಠವಾಗಿವೆ. ಸಮಾಜ ಬಾಂಧವರು ಶಿಕ್ಷಣಕ್ಕೆ ಒತ್ತು ನಿಡಬೇಕು. ಶಿಕ್ಷಣದಿಂದ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಬಹುದು’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದವತಿಯಿಂದ ಏರ್ಪಡಿಸಿದ್ದ ಕೃಷ್ಣ ಜಯಂತಿಯಲ್ಲಿ ಅವರು ಮಾತನಾಡಿದರು.

ಯಾದವ ಸಮಾಜದ ಅಧ್ಯಕ್ಷ ರಮೇಶ ಡೊಳ್ಳೆ ಮಾತನಾಡಿದರು.

ಮುಖಂಡರಾದ ಪ್ರಕಾಶ ಯಾದವ, ನಾಗರಾಜ ಸೇಡಂ, ಅಯ್ಯಣ್ಣ ಗೆಜ್ಜೆಲಿ, ಮಾಳಪ್ಪ ಯಾದವ, ಶಾಂತಪ್ಪ, ಮೇಲಗಿರಿ, ಆನಂದ ಪ್ಯಾಟಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.