ಯಾದಗಿರಿ: 90 ದಿನಗಳ ರಾಷ್ಟ್ರಕ್ಕಾಗಿ ವಿಶೇಷ ಮಧ್ಯಸ್ಥಿಕೆ ಅಭಿಯಾನದ ಭಾಗವಾಗಿ 102 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳಸಿದ್ದಾರಾಧ್ಯ ಎಚ್.ಜೆ. ಅವರ ನಿರ್ದೇಶನದ ಮೇರೆಗೆ ಜುಲೈ 1ರಿಂದ ಆಕ್ಟೋಬರ್ 6ರ ವರೆಗೆ 90 ದಿನಗಳ ರಾಷ್ಟ್ರಕ್ಕಾಗಿ ವಿಶೇಷ ಮಧ್ಯಸ್ಥಿಕೆ ಅಭಿಯಾನ ನಡೆಸಲಾಗಿದೆ. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇದ್ದ ಸುಮಾರು 11,250 ಪ್ರಕರಣಗಳ ಪೈಕಿ 1,887 ಪ್ರಕರಣಗಳನ್ನು ರಾಜಿ ಮಾಡಬಹುದಾದ ಪ್ರಕರಣಗಳಾಗಿ ಗುರುತಿಸಲಾಗಿತ್ತು ಎಂದು ಹೇಳಿದ್ದಾರೆ.
ರಾಜಿ ಮಾಡಬಹುದಾದ ಪ್ರಕರಣಗಳ ಪೈಕಿ 1,234 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ಕಳುಹಿಸಲಾಗಿತ್ತು. ಅವುಗಳ 102 ಪ್ರಕರಣಗಳು ಮಧ್ಯಸ್ಥಿಕೆಯ ಮೂಲಕ ರಾಜಿಯಾಗಿರುತ್ತವೆ. ರಾಜಿಯಾದ ಪ್ರಕರಣಗಳಲ್ಲಿ 3 ಕೌಟುಂಬಿಕ, 8 ಅಪಘಾತ ಪರಿಹಾರ ಕೋರಿದ ಅರ್ಜಿಗಳು, 4 ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು, ಮೂರು ಚಕ್ ಬೌನ್ಸ್ ಪ್ರಕರಣಗಳು, 21 ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, 35 ಪಾಲು ವಿಭಾಗದ ದಾವೆಗಳು ಮತ್ತು ಇತರೆ 23 ಪ್ರಕರಣಗಳು ರಾಜಿಯಾಗಿರುತ್ತವೆ. ಉಳಿದ ಪ್ರಕರಣಗಳ ರಾಜಿ ಸಂಧಾನ ಪ್ರಕ್ರಿಯು ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.