
ಶಹಾಪುರ: ‘ವಿದ್ಯಾರ್ಥಿಗಳಿಗೆ ಅಂಕಗಳ ಜೊತೆಗೆ ಜೀವನಮೌಲ್ಯ ಅತ್ಯಗತ್ಯವಾಗಿದೆ. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಛಲ ಇರಲಿ. ಉತ್ತಮ ಅಧ್ಯಯನ ಶೀಲರಾಗಿ ಮುಂದಿನ ದಿನಗಳಲ್ಲಿ ಸಮಾಜದ ಆಧಾರ ಸ್ತಂಭವಾಗಬೇಕು’ ಎಂದು ಕುಂಬಾರಗಿರಿ ಹಿರೇಮಠದ ಸೂಗುರೇಶ್ವರ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸಾಯಿರಾಮ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸತತ ಪರಿಶ್ರಮದ ಮೂಲಕ ಯಶಸ್ಸು ಸಾಧಸಿ ಕಾಲೇಜಿಗೆ ಹಾಗೂ ತಂದೆ ತಾಯಿಗೆ ಕೀರ್ತಿತರುವಂತಹ ಪ್ರತಿಭಾನ್ವಿತರಾಗಿ. ವಿದ್ಯಾರ್ಥಿಗಳು ಸಮಯ ಪೋಲು ಮಾಡಬಾರದು. ಪಾಲಕರು ಅದೆಷ್ಟೊ ಶ್ರಮವಹಿಸಿ ನಿಮ್ಮ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ ಎಂಬುವುದು ಗಮನದಲ್ಲಿ ಇಟ್ಟಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ’ ಎಂದರು.
ಕಾಲೇಜಿನ ಅಧ್ಯಕ್ಷ ಚನ್ನನಗೌಡ ಪಾಟೀಲ್, ಪ್ರಾಚಾರ್ಯರಾದ ಎಂ.ಪಿ.ಶಾಸನೂರು, ಶರಣು ಗದ್ದುಗೆ, ಶಿವಾನಂದ ಸಿಂದನಕೆರೆ, ಗೋವಿಂದರಾಜ ಸುರಪುರ, ಸುರೇಖಾ, ದೀಪಕ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.