ADVERTISEMENT

ಅಟಲ್‍ಜೀ ಜನಸ್ನೇಹಿ: ತಂತ್ರಾಂಶ ಅಭಿವೃದ್ಧಿ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 21:30 IST
Last Updated 6 ಫೆಬ್ರುವರಿ 2022, 21:30 IST
   

ಬೆಂಗಳೂರು: ಅಟಲ್‍ಜೀ ಜನಸ್ನೇಹಿ ನಿರ್ದೇಶನಾಲಯದಲ್ಲಿ ಖಾಲಿ ಇರುವ ಐದು ತಂತ್ರಾಂಶ ಅಭಿವೃದ್ಧಿ ಎಂಜಿನಿಯರ್‌ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಲು ಅರ್ಜಿಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಬಿಇ, ಬಿಟೆಕ್‌, (ಕಂಪ್ಯೂಟರ್‌ ಸೈನ್ಸ್‌), ಇಸಿಇ, ಐಟಿ (ಮಾಹಿತಿ ವಿಜ್ಞಾನ) ಅಥವಾ ಎಂಸಿಎ ವಿದ್ಯಾರ್ಹತೆ ಹೊಂದಿರಬೇಕು. ತಂತ್ರಾಂಶ ಅಭಿವೃದ್ಧಿಯಲ್ಲಿ ಕನಿಷ್ಠ ಎರಗಿಡು ವರ್ಷಗಳ ಅನುಭವ ಇರಬೇಕು. ಈ ಹುದ್ದೆಗಳಿಗೆ ಮಾಸಿಕ ₹ 80 ಸಾವಿರ ವೇತನ ನಿಗದಿಪಡಿಸಲಾಗಿದೆ. ವಿದ್ಯಾರ್ಹತೆ ಮತ್ತು ನೈಪುಣ್ಯತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತರು ಫೆ. 10ರ ಒಳಗೆ ನಿರ್ದೇಶಕರು, ಅಟಲ್‍ಜೀ ಜನಸ್ನೇಹಿ ನಿರ್ದೇಶನಾಲಯ, ಎಸ್.ಎಸ್.ಎಲ್.ಆರ್. ಕಟ್ಟಡ, ಕೆ.ಆರ್. ವೃತ್ತ, ಬೆಂಗಳೂರು-560001 ಅವರಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.