ADVERTISEMENT

KSRP&IRB, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ: ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಿಶೇಷ
Published 26 ಜನವರಿ 2022, 23:45 IST
Last Updated 26 ಜನವರಿ 2022, 23:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ 6

ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್-ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ) ಹುದ್ದೆಗಳು ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಶೀಘ್ರದಲ್ಲೇ ನಡೆಯಲಿವೆ. ಎರಡೂ ‍ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ದಾವೋಸ್‌ ಶೃಂಗ ಸಭೆಯ ಮೊದಲ ದಿನ ಆಕ್ಸ್‌ಫಾಮ್‌ (Oxfam Report) ಬಿಡುಗಡೆ ಮಾಡಿದ್ದ ‘ಅಸಮಾನತೆ ಕೊಲ್ಲುತ್ತದೆ’ (Inequality Kills) ವರದಿಯಲ್ಲಿ ಉಲ್ಲೇಖಿಸಿರುವಂತೆ, ಕೋವಿಡ್ -19 ಕಾರಣದಿಂದಾಗಿ ವಿಶ್ವದಲ್ಲಿ ಎಷ್ಟು ಮಂದಿ ಬಡತನಕ್ಕೆ ಒಳಗಾಗಿದ್ದಾರೆ?
ಎ) 16 ಕೋಟಿ ಬಿ) 25 ಕೋಟಿ ಸಿ) 45 ಕೋಟಿ ಡಿ) 5 ಕೋಟಿ

ADVERTISEMENT

⇒ಉತ್ತರ: ಎ

2) ಹಲ್ಮಿಡಿ ಶಾಸನಕ್ಕಿಂತ ಪುರಾತನವಾದ ಕನ್ನಡದ ತಾಮ್ರ ಪತ್ರವೊಂದು ಸಿಕ್ಕಿದೆ. ಹಾಗಾದರೆ ಅದು ಎಲ್ಲಿ ಸಿಕ್ಕಿದೆ?

ಎ) ಕೋಲಾರದ ಮುಡಿಯನೂರು

ಬಿ) ಮಂಡ್ಯದ ಮದ್ದೂರು

ಸಿ) ಶಿವಮೊಗ್ಗದ ಶಿಕಾರಿಪುರ

ಡಿ) ಮೇಲಿನ ಯಾವುದೂ ಅಲ್ಲ

⇒ಉತ್ತರ: ಎ

3) ಭಾರತದ ಅರಣ್ಯ ಪ್ರದೇಶದ ಕುರಿತು ಇತ್ತೀಚೆಗೆ ಪ್ರಕಟವಾಗಿರುವ `ಇಂಡಿಯಾ ಫಾರೆಸ್ಟ್ ರಿಪೊರ್ಟ್-2021’ ಪ್ರಕಾರ, 2019ಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಬೆಳಗಾವಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಅರಣ್ಯ ಪ್ರದೇಶ ವೃದ್ಧಿಯಾಗಿದೆ. ಹಾಗಾದರೆ, ಅಷ್ಟೇ ಗರಿಷ್ಠ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಕುಗ್ಗಿರುವ ಜಿಲ್ಲೆ ಎಂದರೆ………………………………

ಎ) ಉಡುಪಿ ಬಿ) ಬೀದರ್
ಸಿ) ಶಿವಮೊಗ್ಗ ಡಿ) ದಾವಣಗೆರೆ
⇒ಉತ್ತರ: ಎ

4) ಏಷ್ಯಾದ ಮೊದಲ ಮೆಕ್ಕೆಜೋಳ ತಳಿ ಅಭಿವೃದ್ಧಿ ಕೇಂದ್ರ ಎಲ್ಲಿ ಆರಂಭವಾಗಲಿದೆ?

ಎ) ಕುಣಿಗಲ್ ಬಿ) ಚನ್ನಗಿರಿ
ಸಿ) ಕಲಘಟಗಿ ಡಿ) ರಾಮನಗರ

⇒ಉತ್ತರ: ಎ

5) 'ಸೆಕೆಂಡರಿ ಅಗ್ರಿಕಲ್ಚರ್' ನಿರ್ದೇಶನಾಲಯ ಎಲ್ಲಿ ಸ್ಥಾಪನೆಯಾಗಲಿದೆ?

ಎ) ಕರ್ನಾಟಕ ಬಿ) ದೆಹಲಿ
ಸಿ) ಬಿಹಾರ್ ಡಿ) ಗೋವಾ

⇒ಉತ್ತರ: ಎ

6) ಇಂಡೋನೇಷ್ಯಾ ತನ್ನ ರಾಜಧಾನಿ ಜಕಾರ್ತಾದ ಬದಲು ನುಸಂತಾರಕ್ಕೆ ಬದಲಾಯಿಸಲು ಹೊರಟಿದೆ. ಇದಕ್ಕೆ ಕಾರಣವೇನು?

ಎ) ಜಾಗತಿಕ ತಾಪಮಾನದ ಕಾರಣ 2050ರ ಹೊತ್ತಿಗೆ ಸಮುದ್ರದ ನೀರು ಉಕ್ಕಿ ಜಕಾರ್ತಾದ ಬಹುಭಾಗ ನೀರಿನಲ್ಲಿ ಮುಳುಗಲಿದೆ.

ಬಿ) ಟೊಂಗಾದಲ್ಲಿ ಆದ ಸುನಾಮಿ ಪರಿಣಾಮ ಜಕಾರ್ತಾದ ಮೇಲೂ ಆಗಿದ್ದು, ಭವಿಷ್ಯದಲ್ಲಾಗುವ ಅನಾಹುತ ತಪ್ಪಿಸಲು ಈ
ನಿರ್ಣಯ ತೆಗೆದುಕೊಳ್ಳಲಾಗಿದೆ.

ಸಿ) ಇಂಡೋನೇಷ್ಯಾ ತನ್ನ ರಾಜಧಾನಿ ಜಕಾರ್ತಾವು ಶತ್ರು ರಾಷ್ಟ್ರಗಳ ದಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದ್ದು ನೈಸರ್ಗಿಕವಾಗಿ
ನುಸಂತಾರ ಹೆಚ್ಚು ಸುರಕ್ಷಿತವಾಗಿದೆ.

ಡಿ) ಮೇಲಿನ ಯಾವುದೂ ಕಾರಣವಲ್ಲ.

⇒ಉತ್ತರ: ಎ

7) ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಕಳೆದ ವರ್ಷ 58 ದೇಶಗಳಿಗೆ ಭಾರತೀಯ ಪ್ರಜೆಗಳು ವೀಸಾ ಇಲ್ಲದೇ ಪ್ರಯಾಣ ಮಾಡಲು ಸಾಧ್ಯವಿತ್ತು. ಈಗ ಅದು 60 ರಾಷ್ಟ್ರಗಳಿಗೆ ವಿಸ್ತರಣೆಯಾಗಿದೆ. ಹಾಗಾದರೆ ಇತ್ತೀಚಿಗೆ ವಿಸಾ ಇಲ್ಲದೇ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟ ದೇಶಗಳನ್ನು ತಿಳಿಸಿ.

ಎ) ಒಮನ್ ಮತ್ತು ಅರ್ಮೇನಿಯಾ
ಬಿ) ಜಪಾನ್ ಮತ್ತು ಜರ್ಮನಿ
ಸಿ) ಚೀನಾ ಮತ್ತು ಪಾಕಿಸ್ತಾನ
ಡಿ) ಫಿಜಿ ಮತ್ತು ಟೊಂಗಾ

⇒ಉತ್ತರ: ಎ

8) ಈ ಕೆಳಗೆ ನೀಡಿರುವ ಹೆಸರುಗಳಲ್ಲಿ ಯಾರು ಇಂಗಾಲದ ಡೈ ಆಕ್ಸೈಡ್‌ನಿಂದ ಟೈಲ್ಸ್ ತಯಾರಿಸಿ ಸಾಧನೆ ಮಾಡಿದ್ದಾರೆ?

ಎ) ಸಿದ್ದಾಂತ್ ಪೂಜಾರ್ ಬಿ) ಮಂಜುಳಾ ಗುರುಸ್ವಾಮಿ
ಸಿ) ತೇಜಸ್ ಸಿದ್ನಾಳ ಡಿ) ರಾಘವೇಂದ್ರ ಆಚಾರಿ

⇒ಉತ್ತರ: ಸಿ

9) ನಮ್ಮ ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಎಲ್ಲಿ ಆರಂಭವಾಗಿದೆ?

ಎ) ಪಟ್ನಾ ಬಿ) ಬೆಂಗಳೂರು ಸಿ) ಲಖನೌ ಡಿ) ವಿಜಯವಾಡ

⇒ಉತ್ತರ: ಸಿ

10) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಜನವರಿ 23ನೇ ದಿನ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮದಿನ.

2) ಜನವರಿ 23 ಅನ್ನು ‘ಪರಾಕ್ರಮ ದಿನ‘ಎಂದು ಕೇಂದ್ರ ಸರ್ಕಾರ ಆಚರಿಸುತ್ತದೆ
3) ನೇತಾಜಿ ಸುಭಾಷ್‌ಚಂದ್ರ ಬೋಸ್‌ ಗೌರವಾರ್ಥ ಈ ಬಾರಿಯಿಂದ ಗಣರಾಜ್ಯೋತ್ಸವ ಆಚರಣೆ ಜನವರಿ 24ರ
ಬದಲು ಜನವರಿ 23 ರಿಂದ ಆರಂಭ ಮಾಡಲಾಗಿದೆ.

ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ.
ಎ) ಹೇಳಿಕೆ 1, 2 ಮತ್ತು 3 ಹೇಳಿಕೆಗಳು ಸರಿಯಾಗಿವೆ.
ಬಿ) ಹೇಳಿಕೆ 1 ಮತ್ತು 2 ಮಾತ್ರ ಸರಿಯಾಗಿವೆ.
ಸಿ) ಹೇಳಿಕೆ 1 ಮತ್ತು 3 ಮಾತ್ರ ಸರಿಯಾಗಿವೆ
ಡಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

⇒ಉತ್ತರ: ಎ

11) ಇತ್ತೀಚಿಗೆ ನಿಧನರಾದ ಪಂಡಿತ್ ಬಿರ್ಜು ಮಹಾರಾಜ್ ಯಾವ ನೃತ್ಯ ಪ್ರಕಾರದಲ್ಲಿ ಖ್ಯಾತಿ ಪಡೆದವರು?
ಎ) ಭರತ ನಾಟ್ಯ

ಬಿ) ಯಕ್ಷಗಾನ

ಸಿ) ಮೋಹಿನಿ ಅಟ್ಟಂ

ಡಿ) ಕಥಕ್
⇒ಉತ್ತರ: ಡಿ

12) ಯಾವ ಗ್ರಾಮವನ್ನು ದೇಶದ ಮೊದಲ `ಸಿಂಥೆಟಿಕ್ ಪ್ಯಾಡ್ ಮುಕ್ತ ಗ್ರಾಮ’ ಎಂದು ಘೋಷಿಸಲಾಗಿದೆ?

ಎ) ಕರ್ನಾಟಕದ ಹನೇಹಳ್ಳಿ ಬಿ) ಕೇರಳದ ಕುಂಬಳಂಗಿ
ಸಿ) ತಮಿಳುನಾಡಿನ ಗೊಗ್ಗೈಪಟ್ಟಿ ಡಿ) ಆಂಧ್ರಪ್ರದೇಶದ ಆನಂದಪುರಂ

⇒ಉತ್ತರ: ಬಿ

13) ಕಾಶಿ ಕಾರಿಡಾರ್ ಮಾದರಿಯಲ್ಲಿ ರಥ ಬೀದಿಯನ್ನು ಅಭಿವೃದ್ಧಿ ಮಾಡಲು ಈ ಕೆಳಗಿನ ಯಾವ ಕ್ಷೇತ್ರವನ್ನು ಆರಿಸಿಕೊಳ್ಳಲಾಗಿದೆ?

ಎ) ಗೋಕರ್ಣದ ರಥ ಬೀದಿ ಬಿ) ಮುರಡೇಶ್ವರದ ಸಮುದ್ರತೀರ
ಸಿ) ಕುಕ್ಕೆ ಸುಬ್ರಮಣ್ಯ ರಥ ಬೀದಿ ಡಿ) ನಂಜನಗೂಡಿನ ರಥ ಬೀದಿ.

⇒ಉತ್ತರ: ಸಿ

14) ಈ ಕೆಳಗಿನ ಯಾವ ರಾಜ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ?

ಎ) ಕರ್ನಾಟಕ ಬಿ) ಮಿಜೋರಾಮ್

ಸಿ) ಬಿಹಾರ್ ಡಿ) ಪಂಜಾಬ್

⇒ಉತ್ತರ:ಬಿ

15) ಈ ಬಾರಿಯ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ದಕ್ಷಿಣ ಭಾರತದಿಂದ ಆಯ್ಕೆಗೊಂಡ ಏಕೈಕ ಸ್ತಬ್ಧಚಿತ್ರ ಯಾವ ರಾಜ್ಯಕ್ಕೆ ಸೇರಿದ್ದಾಗಿದೆ?

ಎ) ಕರ್ನಾಟಕ ಬಿ) ತೆಲಂಗಾಣ
ಸಿ) ತಮಿಳುನಾಡು ಡಿ) ಕೇರಳ

⇒ಉತ್ತರ: ಎ

16) ………………….ಗ್ರಾಮಕ್ಕೆ “ರಕ್ತದಾನಿಗಳ ತವರೂರು” ಎಂದು ಗೂಗಲ್‌ ಪ್ರಶಂಸೆ ಮಾಡಿದೆ

ಎ) ಅಕ್ಕಿ ಆಲೂರು ಬಿ) ನಾಡು ಮಾಸ್ಕೇರಿ
ಸಿ) ಗಾಣಗಾಪುರ ಡಿ) ಚಂದ್ರಗುತ್ತಿ

⇒ಉತ್ತರ: ಎ

ಮಾಹಿತಿ: Spardha Bharati UPSC

ಯೂಟ್ಯೂಬ್ ಚಾನಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.