ADVERTISEMENT

2019–20ರಲ್ಲಿ ದೇಶದಾದ್ಯಂತ 42 ಸಾವಿರ ಉದ್ಯೋಗ ಮೇಳ: 18.4 ಲಕ್ಷ ಜನ ಆಯ್ಕೆ

ಪಿಟಿಐ
Published 13 ಫೆಬ್ರುವರಿ 2025, 10:45 IST
Last Updated 13 ಫೆಬ್ರುವರಿ 2025, 10:45 IST
<div class="paragraphs"><p>ಸಚಿವ ಜಿತೇಂದ್ರ ಸಿಂಗ್‌</p></div>

ಸಚಿವ ಜಿತೇಂದ್ರ ಸಿಂಗ್‌

   

ಪಿಟಿಐ ಚಿತ್ರ

ನವದೆಹಲಿ: 2019–20ರ ಅವಧಿಯಲ್ಲಿ ದೇಶದ ವಿವಿಧ ನಗರಗಳಲ್ಲಿ 42 ಸಾವಿರ ಉದ್ಯೋಗ ಮೇಳ ನಡೆಸಲಾಗಿದ್ದು 18.4 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಗುರುವಾರ ತಿಳಿಸಿದ್ದಾರೆ.

ADVERTISEMENT

2022ರ ಅ.22ರಂದು ಪ್ರಧಾನ ಮಂತ್ರಿಯವರು ರೋಜ್‌ಗಾರ್‌ ಮೇಳಕ್ಕೆ ಚಾಲನೆ ನೀಡಿದ್ದರು. ಬಳಿಕ ದೇಶದ ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 45–50 ನಗರಗಳಲ್ಲಿ 14 ರೋಜ್‌ಗಾರ್‌ ಮೇಳ ನಡೆಸಲಾಗಿದೆ. ಇದರಲ್ಲಿ ಭಾಗಿಯಾದ ವಿವಿಧ ಸಚಿವಾಲಯಗಳು, ಇಲಾಖೆಗಳು ಲಕ್ಷಗಟ್ಟಲೆ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರವನ್ನು ನೀಡಿದೆ ಎಂದರು.

ರೋಜ್‌ಗಾರ್‌ ಮೇಳದ ಮೂಲಕ ದೇಶದ ವಿವಿಧ ಸಚಿವಾಲಯ ಮತ್ತು ಇಲಾಖೆಗಳಿಗೆ ನೇಮಕಾತಿಯನ್ನು ಮಾಡಲಾಗಿದೆ ಎಂದು ಸಿಂಗ್ ಲಿಖಿತ ರೂಪದಲ್ಲಿ ರಾಜ್ಯಸಭೆಯಲ್ಲಿ ಉತ್ತರಿಸಿದರು.

ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆಯಲ್ಲಿ ನೇಮಕಾತಿಯ ಸಂಪೂರ್ಣ ವಿವರಗಳಿವೆ ಎಂದರು.

ದೇಶದ ಯುವ ಜನತೆಗೆ ಉದ್ಯೋಗ ಕಲ್ಪಿಸಲು ಭಾರತ ಸರ್ಕಾರ  ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ಪ್ರಮುಖವಾಗಿ ರಸ್ತೆ ನಿರ್ಮಾಣ, ರೈಲ್ವೆ, ವಿಮಾನ ನಿಲ್ದಾಣ, ಬಂದರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.