ADVERTISEMENT

ನಾಳೆಯಿಂದ ಸಿಇಟಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 20:30 IST
Last Updated 14 ಜೂನ್ 2022, 20:30 IST
   

ಬೆಂಗಳೂರು: 2022 ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಗುರುವಾರ, ಶುಕ್ರವಾರ ಮತ್ತು ಶನಿವಾರ ರಾಜ್ಯದ 486 ಕೇಂದ್ರಗಳಲ್ಲಿ ನಡೆಯಲಿದೆ.

ಈ ಪರೀಕ್ಷೆಗಾಗಿ 2,16,525 ಅಭ್ಯರ್ಥಿಗಳು ಹೆಸರನ್ನು ನೋಂದಾಯಿಸಿದ್ದು, ಇದರಲ್ಲಿ 1,04,550 ವಿದ್ಯಾರ್ಥಿಗಳು ಮತ್ತು 1,11,975 ವಿದ್ಯಾರ್ಥಿನಿಯರು ಸೇರಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳಿಗೆ ಮಾರ್ಗಸೂಚಿಯನ್ನುಬಿಡುಗಡೆ ಮಾಡಿದ್ದು, ಪರೀಕ್ಷಾ ಕೊಠಡಿಯೊಳಗೆ ಎಲೆಕ್ಟ್ರಾನಿಕ್‌ ಗ್ಯಾಜೆಟ್‌, ಕೈಗಡಿಯಾರ, ಬ್ಲೂಟೂತ್‌ ಮತ್ತು ಮೊಬೈಲ್‌ ಫೋನ್‌ಗಳನ್ನು ತರುವಂತಿಲ್ಲ. ಅಲ್ಲದೆ, ತಲೆ, ಕಿವಿ ಮುಚ್ಚುವಂತಹ ಬಟ್ಟೆ ಮತ್ತು ಉಡುಪುಗಳಿಗೆ ಅವಕಾಶವಿಲ್ಲ. ಸರ್ಜಿಕಲ್‌ ಮಾಸ್ಕ್‌ ತೊಟ್ಟು ಬರಲು ಅವಕಾಶ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.