ಪ್ರಾತಿನಿಧಿಕ ಚಿತ್ರ
ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ
ಭಾರತೀಯ ನೌಕಾಪಡೆಯ ದಿನಕ್ಕೆ ಸಂಬಂಧಿಸಿ ಈ ಹೇಳಿಕೆಗಳನ್ನು ಪರಿಗಣಿಸಿ.
ಎ. ಪ್ರತಿ ವರ್ಷ ಡಿಸೆಂಬರ್ 14 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ
ಬಿ. 1971ರಲ್ಲಿ ಇಂಡೋ–ಪಾಕಿಸ್ತಾನ ಯುದ್ಧದ ಸಮಯದಲ್ಲಿ ನಡೆಸಿದ ಆಪರೇಷನ್ ಟ್ರೈಡೆಂಟ್‌ನಲ್ಲಿ ಭಾರತೀಯ ನೌಕಾಪಡೆಯ ಪಾತ್ರವನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ
ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ
ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು
ಡಿ. ಎರಡೂ ಸರಿ
ಉತ್ತರ: ಬಿ
ಈ ಹೇಳಿಕೆಗಳನ್ನು ಪರಿಗಣಿಸಿ.
ಎ. INS ಶಾತವಾಹನ ತರಬೇತಿ ಕೇಂದ್ರ ಆಂಧ್ರಪ್ರದೇಶ ವಿಶಾಖಪಟ್ಟಣಂನಲ್ಲಿದೆ
ಬಿ. INS ಕದಂಬ ನೌಕಾನೆಲೆ ಕಾರವಾರದಲ್ಲಿದೆ
ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ
ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು
ಡಿ. ಎರಡೂ ಸರಿ
ಉತ್ತರ: ಡಿ
ಈ ಹೇಳಿಕೆಗಳನ್ನು ಪರಿಗಣಿಸಿ.
ಎ. ಮಾಂಟ್ರಿಯಲ್ ಪ್ರೋಟೋಕಾಲ್‌ನ ನೆನಪಿಗಾಗಿ 16 ಸೆಪ್ಟೆಂಬರ್ ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ.
ಬಿ. 2024ರ ವಿಶ್ವ ಓಝೋನ್ ದಿನದ ಥೀಮ್, ‘ಮಾಂಟ್ರಿಯಲ್ ಪ್ರೋಟೋಕಾಲ್: ಅಡ್ವಾನ್ಸಿಂಗ್ ಕ್ಲೈಮೇಟ್ ಆಕ್ಷನ್’ ಆಗಿದೆ
ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ
ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು
ಡಿ. ಎರಡೂ ಸರಿ
ಉತ್ತರ: ಡಿ
ಈ ಹೇಳಿಕೆಗಳನ್ನು ಪರಿಗಣಿಸಿ.
ಎ. ಮಾಂಟ್ರಿಯಲ್ ಪ್ರೋಟೋಕಾಲ್ ಅನ್ನು 16 ಸೆಪ್ಟೆಂಬರ್ 1987ರಂದು ಸಹಿ ಮಾಡಲಾಯಿತು
ಬಿ. ಓಝೋನ್–ಡಿಪ್ಲೀಟಿಂಗ್ ವಸ್ತುಗಳು (ODS) ಎಂದು ಕರೆಯುವ ಮಾನವ ನಿರ್ಮಿತ ರಾಸಾಯನಿಕಗಳ ಉತ್ಪಾದನೆ ಮತ್ತು ಬಳಕೆಯನ್ನು ಮಾಂಟ್ರಿಯಲ್ ಪ್ರೋಟೋಕಾಲ್ ನಿಯಂತ್ರಿಸುತ್ತದೆ
ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ
ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು
ಡಿ. ಎರಡೂ ಸರಿ
ಉತ್ತರ: ಡಿ
ಈ ಹೇಳಿಕೆಗಳನ್ನು ಪರಿಗಣಿಸಿ.
ಎ. ಓಝೋನ್ ರಕ್ಷಣೆಯ ವಿಯೆನ್ನಾ ಸಮಾವೇಶ 1988ರಲ್ಲಿ ಜಾರಿಗೆ ಬಂದಿತು. 2009ರ ಹೊತ್ತಿಗೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿತು
ಬಿ. 2020ರ ಕಿಗಾಲಿ ಒಪ್ಪಂದವು ಮಾಂಟ್ರಿಯಲ್ ಪ್ರೋಟೋಕಾಲ್ ಗೆ ಮಾಡಿದ ತಿದ್ದುಪಡಿಯಾಗಿದೆ
ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ
ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು
ಡಿ. ಎರಡೂ ಸರಿ
ಉತ್ತರ: ಎ
ಗ್ರಾಮೀಣ ಜೀವನೋಪಾಯ ಅಭಿಯಾನವನ್ನು ಕೆಳಗಿನ ಯಾವ ಮತ್ತೊಂದು ಹೆಸರಿನಲ್ಲಿಯೂ ಕೂಡ ಕರೆಯಲಾಗುತ್ತದೆ?
ಎ. ದೀನ್ ದಯಾಳ್ ಅಂತ್ಯೋದಯ ಯೋಜನೆ
ಬಿ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ
ಸಿ. ಅಟಲ್ ಗ್ರಾಮೀಣ ಕೌಶಲ್ಯ ಯೋಜನೆ
ಡಿ. ಪ್ರಧಾನ ಮಂತ್ರಿ ಗ್ರಾಮೀಣ ಕೌಶಲ ಯೋಜನೆ
ಉತ್ತರ: ಎ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.