ADVERTISEMENT

ಪ್ರಜಾವಾಣಿ ಕ್ವಿಜ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST

1. ಕರೋನಾ ವೈರಸ್ ಕಾಯಿಲೆ ಮೊತ್ತಮೊದಲು ಪತ್ತೆಯಾಗಿದ್ದು ಚೀನಾದ ಯಾವ ನಗರದಲ್ಲಿ?

ಅ) ಬೀಜಿಂಗ್ ಆ) ಷಾಂಘೈ
ಇ) ವೂಹಾನ್ ಈ) ಹಾಂಕಾಂಗ್

2. ಅನಂತ ಮೂರ್ತಿಯವರ ಯಾವ ಕಾದಂಬರಿ ಚಲನಚಿತ್ರವಾಗಿಲ್ಲ?

ADVERTISEMENT

ಅ) ಅವಸ್ಥೆ ಆ) ಸಂಸ್ಕಾರ
ಇ) ಘಟಶ್ರಾದ್ಧ ಈ) ಭವ

3. ಸಾಲಿಗ್ರಾಮಗಳನ್ನು ಯಾವ ನದಿಯಿಂದ ಸಂಗ್ರಹಿಸಲಾಗುತ್ತದೆ?

ಅ) ತಪತಿ ಆ) ಗಂಗಾ
ಇ) ಗಂಡಕಿ ಈ) ಸಿಂಧು

4. '83' ಹಿಂದಿ ಚಲನಚಿತ್ರದಲ್ಲಿ ಯಾವ ಕ್ರಿಕೆಟಿಗನ ಬದುಕಿನ ವಿವರಗಳು ಪ್ರಧಾನವಾಗಿ ಚಿತ್ರಿತವಾಗಲಿವೆ?

ಅ) ಗವಾಸ್ಕರ್ ಆ) ಕಪಿಲ್ ದೇವ್
ಇ) ಕಿರ್ಮಾನಿ ಈ) ಧೋನಿ

5. ವಿದ್ಯುತ್ ಚಾಲಿತ ಕಾರುಗಳ ಬ್ಯಾಟರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಲೋಹ ಯಾವುದು?

ಅ) ಪ್ಲಾಟಿನಂ ಆ) ಚಿನ್ನ
ಇ) ತಾಮ್ರ ಈ) ಲಿಥಿಯಂ

6. 'ಭಗೀರಥ ಪ್ರಯತ್ನ' ಎಂಬ ನುಡಿಗಟ್ಟಿನ ಅರ್ಥವೇನು?

ಅ) ಪಟ್ಟುಬಿಡದೆ ಕಾರ್ಯ ಸಾಧಿಸು
ಆ) ನೀರು ಹೊರು
ಇ) ವಿಫಲ ಪ್ರಯತ್ನ
ಈ) ಸುಲಭವಾಗಿ ಗುರಿಮುಟ್ಟು

7. ಈ ಬಾರಿಯ 19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯನ್ನು ಗೆದ್ದ ದೇಶ ಯಾವುದು?

ಅ) ಬಾಂಗ್ಲಾದೇಶ ಆ) ಭಾರತ
ಇ) ಪಾಕಿಸ್ತಾನ ಈ) ಶ್ರೀಲಂಕಾ

8. ಪ್ರಸ್ತುತ ಭಾರತದಲ್ಲಿ ಯಾವ ಪರಿಮಾಣದ ವಾಹನ ಇಂಧನಗಳನ್ನು ಬಳಸಲಾಗುತ್ತಿದೆ?

ಅ) ಬಿಎಸ್- 4 ಆ) ಬಿಎಸ್ - 3
ಇ) ಬಿಎಸ್- 2 ಈ ) ಬಿಎಸ್- 1

9. ಆಂಧ್ರಪ್ರದೇಶದ ಗುಂಟೂರು ಯಾವ ಬೆಳೆಗೆ ಪ್ರಸಿದ್ಧಿ?

ಅ) ರಾಗಿ ಆ) ಮೆಣಸಿನಕಾಯಿ
ಇ) ಜೋಳ ಈ) ಅವರೆ

10. ಶಾಲ್ಮಲಾ ನದಿಯು ಎಲ್ಲಿ ಹುಟ್ಟುತ್ತದೆ?

ಅ) ಧಾರವಾಡ ಆ) ಹಾವೇರಿ
ಇ) ಇಟಗಿ ಈ) ಶಿರಸಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಕೊಡಗು 2. ಹೈದರಾಬಾದ್ 3. ಕುದುರೆ ಸವಾರಿ 4. ಬ್ರೂಸ್ಲಿ 5. ಬೆಂಗಳೂರು ನಗರ 6. ಚಿಕ್ಕಮಗಳೂರು 7. ಸಿತಾರ್ 8. ಬಾಯಿ 9. ಪ್ರಪಂಚ 10. ಮುಸ್ಲಿಂ

ಎಸ್‌.ಎಲ್‌.ಶ್ರೀನಿವಾಸಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.