ADVERTISEMENT

ಪ್ರಜಾವಾಣಿ ಕ್ವಿಜ್

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:30 IST
Last Updated 21 ಮೇ 2019, 19:30 IST

1. ಉಲ್ಲಾಳದ ಅಬ್ಬಕ್ಕ ರಾಣಿಯು ಯಾವ ವಿದೇಶೀಯರ ವಿರುದ್ಧ ಹೋರಾಡಿದಳು?

ಅ) ಇಂಗ್ಲಿಷರುಆ) ಪೋರ್ಚುಗೀಸರುಇ) ಡಚ್ಚರುಈ) ಫ್ರೆಂಚರು

2. ಅಡುಗೆ ಅನಿಲವು ಮೂಲತಃ..

ADVERTISEMENT

ಅ) ವಾಸನೆ ರಹಿತ‌ಆ) ಸುವಾಸನೆ ಉಳ್ಳದ್ದು‌ಇ) ಕೆಟ್ಟ ವಾಸನೆಯದುಈ) ಯಾವುದೂ ಅಲ್ಲ

3. ಬಸವಣ್ಣನವರ ಕುರಿತ ಕಾದಂಬರಿ ಸರಣಿಯನ್ನು ರಚಿಸಿದ ಸಾಹಿತಿ ಯಾರು?

ಅ) ಅನಕೃಆ) ತರಾಸುಇ) ಬಿ.ಪುಟ್ಟಸ್ವಾಮಯ್ಯಈ) ನಿರಂಜನ

4. ಇಸ್ಲಾಂ ಕ್ಯಾಲೆಂಡರ್‌ನ ಪ್ರಕಾರ ರಂಜಾನ್ ಎಷ್ಟನೇ ತಿಂಗಳು?

ಅ) ಒಂಬತ್ತು ಆ) ಆರುಇ) ನಾಲ್ಕು ಈ) ಹನ್ನೆರಡು

5. ಘೋಟುಲ್ ಮಾದರಿಯ ವಿವಾಹ ಪದ್ಧತಿ ಯಾವ ಬುಡಕಟ್ಟು ಜನಾಂಗದಲ್ಲಿ ರೂಢಿಯಲ್ಲಿದೆ?

ಅ) ಗೊಂಡರು ಆ) ತೋಡರುಇ) ಇರುಳರು ಈ) ಜರವಾಗಳು

6. ಪ್ರಧಾನಿ ರಾಜೀವ್ ಗಾಂಧಿಯವರ ಹಂತಕರು ಯಾವ ಸಂಘಟನೆಗೆ ಸೇರಿದವರಾಗಿದ್ದರು?

ಅ) ಉಲ್ಫಾ ಆ) ಎಲ್‌ಟಿಟಿಇಇ) ಅಲ್ ಖೈದಾ ಈ) ತಾಲಿಬಾನ್

7. ‘ಆಕ್ವಾ ರೀಜಿಯಾ’ವನ್ನು ಯಾವ ಲೋಹವನ್ನು ಕರಗಿಸಲು ಬಳಸಲಾಗುತ್ತದೆ?

ಅ) ತಾಮ್ರ ಆ) ಹಿತ್ತಾಳೆಇ) ಅಲ್ಯೂಮಿನಿಯಂ ಈ) ಚಿನ್ನ

8. ಭಾರತದಲ್ಲಿ ತುರ್ತು ಪರಿಸ್ಥಿತಿ ಇದ್ದದ್ದು ಯಾವ ಕಾಲಘಟ್ಟದಲ್ಲಿ?

ಅ) 1975-1977 ಆ) 1970-1972ಇ) 1972-1974 ಈ) 1979-1981

9. ಅಮೆರಿಕದ ಅತಿ ಹೆಚ್ಚು ವಿಸ್ತಾರವಾದ ರಾಜ್ಯ ಯಾವುದು?

ಅ) ಅಲಾಸ್ಕ ಆ) ಟೆಕ್ಸಾಸ್ಇ) ಫ್ಲೋರಿಡಾಈ) ಕ್ಯಾಲಿಫೋರ್ನಿಯಾ

10. ಡಾ. ರಾಜಕುಮಾರ್ ನಟಿಸಿದ ನೂರನೇ ಚಲನಚಿತ್ರ ಯಾವುದು?

ಅ) ಸನಾದಿ ಅಪ್ಪಣ್ಣಆ) ಭಾಗ್ಯದ ಬಾಗಿಲುಇ) ಮೂರೂವರೆ ವಜ್ರಗಳುಈ) ಭಕ್ತ ಕನಕದಾಸ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1.ರಾಷ್ಟ್ರಪತಿ 2. ಗೋಧಿ 3. ಮಗ4. ಈಥರ್ 5. ಕರಡಿ- ಗೂಳಿ

6. ಮಹಾತ್ಮ ಗಾಂಧಿ7. ಬಟಾಣಿ 8. ನಕ್ಕರೆ ಅದೇ ಸ್ವರ್ಗ

9. ಋಜುವಾತು 10. ನಾಲ್ಕು

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.