ADVERTISEMENT

ಪ್ರಜಾವಾಣಿ ಕ್ವಿಜ್| ಸಬ್ಯಸಾಚಿ ಮುಖರ್ಜಿ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 11 ಜೂನ್ 2019, 19:30 IST
Last Updated 11 ಜೂನ್ 2019, 19:30 IST
   

1. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕೇಂದ್ರ ಕಚೇರಿ ಎಲ್ಲಿದೆ?
ಅ)ಕಲ್ಬುರ್ಗಿ
ಆ)ಮೈಸೂರು
ಇ)ಬೆಂಗಳೂರು
ಈ)ಹುಬ್ಬಳ್ಳಿ

2. ‘ಅಟ್ ದ ಮರ್ಸಿ ಆಫ್ ದ ವಿಂಡ್’ ಎಂಬ ಇಂಗ್ಲಿಷ್ ನುಡಿಗಟ್ಟಿನ ಅರ್ಥವೇನು?
ಅ)ಗಾಳಿ ಬೀಸು
ಆ)ನಿಧನವಾಗು
ಇ)ದಯನೀಯ ಸ್ಥಿತಿಯಲ್ಲಿರು
ಈ)ತೂರಾಡು

3. ಸಬ್ಯಸಾಚಿ ಮುಖರ್ಜಿ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?
ಅ)ಫ್ಯಾಷನ್ ಡಿಸೈನಿಂಗ್
ಆ)ರಾಜಕೀಯ
ಇ)ಕ್ರೀಡೆ
ಈ)ಆಡಳಿತ

ADVERTISEMENT

4. ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ’ ಎಂದ ಕವಿ ಯಾರು?
ಅ)ರನ್ನ
ಆ)ಪಂಪ
ಇ)ಕುಮಾರ ವ್ಯಾಸ
ಈ)ಜನ್ನ

5. ‘ದ ರೋಸ್ ಬೌಲ್’ ಎಂಬ ಹೆಸರಿನ ಕ್ರಿಕೆಟ್ ಕ್ರೀಡಾಂಗಣ ಎಲ್ಲಿದೆ?
ಅ)ಸೌತಾಂಪ್ಟನ್
ಆ)ವೆಂಬ್ಲಿ
ಇ)ಲೀಡ್ಸ್
ಈ)ವೆಸ್ಟ್ ಮಿನಿಸ್ಟರ್

6. ‘ಸಾರೇ ಜಹಾಂ ಸೆ ಅಚ್ಛಾ’ ಎಂಬ ದೇಶಭಕ್ತಿ ಗೀತೆ ಯಾರ ರಚನೆ?
ಅ)ರವೀಂದ್ರನಾಥ ಟಾಗೋರ್
ಆ)ಬಂಕಿಮ ಚಂದ್ರ
ಇ)ಗುಲ್ಜಾರ್
ಈ)ಮಹಮದ್ ಇಕ್ಬಾಲ್

7. ಪೆರು ದೇಶದ ಮಚುಪಿಚು ಯಾವ ನಾಗರಿಕತೆಗೆ ಸಂಬಂಧಿಸಿದ ಸ್ಥಳ?
ಅ)ಈಜಿಪ್ಶಿಯನ್
ಆ)ಇಂಕಾ
ಇ)ರೋಮನ್
ಈ)ಗ್ರೀಕ್

8. ಇವುಗಳಲ್ಲಿ ಯಾವುದು ಜಲಜನಕದ ಐಸೋಟೋಪ್ (ಸಮಸ್ಥಾನಿ) ಅಲ್ಲ?
ಅ)ಡ್ಯುಟೇರಿಯಂ
ಆ)ಟ್ರೈಟಿಯಂ
ಇ)ಪ್ರೋಟಿಯಂ
ಈ)ಫರ್ಮಿಯಂ

9. ಗುಂಡರ್ಟ್ ಯಾವ ಭಾರತೀಯ ಭಾಷೆಗೆ ನಿಘಂಟನ್ನು ರಚಿಸಿದ್ದಾನೆ?
ಅ)ಮಲಯಾಳಂ
ಆ)ತೆಲುಗು
ಇ)ತುಳು
ಈ)ಮರಾಠಿ

10. ಆರ್ಥರ್ ಕಾನನ್ ಡಯಲ್ ಸೃಷ್ಟಿಸಿದ ಅತ್ಯಂತ ಜನಪ್ರಿಯ ಪಾತ್ರ ಯಾವುದು?
ಅ)ಫ್ಯಾಂಟಮ್
ಆ)ಶೆರ್ಲಾಕ್ ಹೋಮ್ಸ್‌
ಇ)ಜೇಮ್ಸ್ ಬಾಂಡ್
ಈ)ಟಾಂ ಮತ್ತು ಜೆರ‍್ರಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1.ಅಧಿಕಾರ ಮತ್ತು ಗೋಪ್ಯತೆ
2.ಬೇಂದ್ರೆ
3.ಹತ್ತು
4.ನಾ.ಸು.ಹರ್ಡಿಕರ್
5.ಅತಿರಂಜಿತ ಸುದ್ದಿ ಪತ್ರಿಕೋದ್ಯಮ
6. ಜಪಾನ್
7.ಲೆವಾಸಿಯೆ
8.ಪುಣೆ
9. ಕಾರ್ತಿಕೇಯ
10. ಪೆನಾಲ್ಟಿ ಸ್ಟ್ರೋಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.