ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಎಲ್‍ಐ‍ಸಿ ಎಚ್‍ಎಫ್‍ಎಲ್ ವಿದ್ಯಾದಾನ್ ಸ್ಕಾಲರ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 19:30 IST
Last Updated 4 ಸೆಪ್ಟೆಂಬರ್ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಎಲ್‍ಐ‍ಸಿ ಎಚ್‍ಎಫ್‍ಎಲ್ ವಿದ್ಯಾದಾನ್ ಸ್ಕಾಲರ್‌ಷಿಪ್‌ 2022‌

ವಿವರ: ಎಲ್‍ಐ‍ಸಿ ಎಚ್‍ಎಫ್‍ಎಲ್ 11ನೇ ತರಗತಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಮುಂದುವರಿಸುವ ವಿದ್ಯಾರ್ಥಿಗಳಿಗೆ ನೆರವಾಗಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಕಡಿಮೆ ಆದಾಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಮೀಸಲಿಡಲಾಗಿದೆ.

ಅರ್ಹತೆ: ಪ್ರಸ್ತುತ 11ನೇ ತರಗತಿ ಮತ್ತು ಮೊದಲ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ADVERTISEMENT

ಅರ್ಜಿದಾರರು ತಮ್ಮ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 3.60 ಲಕ್ಷಕ್ಕಿಂತ ಹೆಚ್ಚಿರಬಾರದು.

ಆರ್ಥಿಕ ನೆರವು: ₹20,000ದ ವರೆಗೆ

ಅರ್ಜಿ ಸಲ್ಲಿಕೆ ಕೊನೆ ದಿನ: 30-09-2022

ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ: www.b4s.in/praja/LHVT3

ಪಿಜಿ ಸ್ಕಾಲರ್‌ಷಿಪ್ ಫಾರ್ ಪ್ರೊಫೆಷನಲ್ ಕೋರ್ಸಸ್ ಫಾರ್ ಎಸ್‍ಸಿ/ಎಸ್‌ಟಿ 2022-23

ವಿವರ: ಪಿಜಿ ಸ್ಕಾಲರ್‌‌‌‌ಶಿಪ್ ಫಾರ್ ಪ್ರೊಫೆಷನಲ್ ಕೋರ್ಸಸ್ ಫಾರ್ ಎಸ್‍ಸಿ/ಎಸ್‌‌‌‌‌‍ಟಿ 2022-23, ವೃತ್ತಿಪರ ವಿಷಯಗಳಲ್ಲಿ ಸ್ನಾತಕೋತ್ತರ ಹಂತದಲ್ಲಿ ವಿದ್ಯಾಭಾಸ ಮಾಡುವ ಅಭ್ಯರ್ಥಿಗಳಿಗಾಗಿ ಕೇಂದ್ರ ಸರ್ಕಾರದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ)ಉಪಕ್ರಮವಾಗಿದೆ.

ಅರ್ಹತೆ: ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಮತ್ತು ಸ್ನಾತಕೋತ್ತರ ಹಂತದಲ್ಲಿ ವೃತ್ತಿಪರ ಕೋರ್ಸ್ ಅನ್ನು ಮುಂದುವರಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಯುಜಿಸಿ ಕಾಯಿದೆಯ ಸೆಕ್ಷನ್ 2(ಎಫ್) ಮತ್ತು 12(ಬಿ) ಅಡಿಯಲ್ಲಿ ಸೇರಿಸಲಾದ ವಿಶ್ವವಿದ್ಯಾಲಯಗಳು/ಸಂಸ್ಥೆಗಳು/ಕಾಲೇಜುಗಳಲ್ಲಿ /1956 ರ ಯುಜಿಸಿ ಕಾಯ್ದೆ 3 ರ ಅಡಿಯಲ್ಲಿ ಸೇರಿಸಲಾದ ಡೀಮ್ಡ್ ಟು ಬಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರಬೇಕು ಮತ್ತು ಕೇಂದ್ರ/ರಾಜ್ಯ ಸರ್ಕಾರ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಿಂದ ನಿಧಿಯನ್ನು ಪಡೆಯುತ್ತಿರುವ ಯುಜಿಸಿ/ ವಿಶ್ವವಿದ್ಯಾಲಯಗಳು/ಸಂಸ್ಥೆಗಳು/ಕಾಲೇಜುಗಳಿಂದ ಅನುದಾನದ ನೆರವು ಪಡೆಯಲು ಅರ್ಹರಾಗಿರಬೇಕು.

ಆರ್ಥಿಕ ನೆರವು: ಮಾಸಿಕ ₹7,800, ಪಿಜಿ ಕೋರ್ಸ್‌‌‌‌‌‌‌‌‌‌ನ ಕಾಲಾವಧಿಗೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನ: 31-10-2022

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ: www.b4s.in/praja/PSPS6

ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಷಿಪ್ ಆ್ಯಂಡ್‌ ಮೆಂಟರ್‌ಷಿಪ್ ಪ್ರೋಗ್ರಾಂ 2022-23

ವಿವರ: ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್
ಯುವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ನೀಡುತ್ತಿದೆ.

ಅರ್ಹತೆ: 2022ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ 75 ಅಥವಾ ಪಿಯುಸಿ ಪರೀಕ್ಷೆಯಲ್ಲಿ ಶೇ 60 ಅಂಕಗಳೊಂದಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಉನ್ನತ ಮಾಧ್ಯಮಿಕ, 3-ವರ್ಷದ ಪದವಿ ಮತ್ತು 4-ವರ್ಷದ ವೃತ್ತಿಪರ ಕೋರ್ಸ್‌ಗಳನ್ನು (ಎಂಜಿನಿಯರಿಂಗ್/ಎಂಬಿಬಿಎಸ್/ಬಿಡಿಎಸ್ ಡೆಂಟಲ್) ಮುಂದುವರಿಸಲು ಅರ್ಜಿ ಸಲ್ಲಿಸಬಹುದು. ಎಲ್ಲಾ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 5 ಲಕ್ಷಗಳಿಗಿಂತ ಕಡಿಮೆಯಿರಬೇಕು.

ಆರ್ಥಿಕ ನೆರವು: 3 ವರ್ಷಗಳವರೆಗೆ ಅಧ್ಯಯನಕ್ಕಾಗಿ ವರ್ಷಕ್ಕೆ ₹ 30,000.

ಅರ್ಜಿ ಸಲ್ಲಿಕೆಗೆ ಕೊನೆ ದಿನ: 31-12-2022

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಮಾಹಿತಿಗೆ:www.b4s.in/praja/KISF6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.