ADVERTISEMENT

ವಿವಿಧ ವಿದ್ಯಾರ್ಥಿ ವೇತನಗಳ ಕುರಿತ ಮಾಹಿತಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 0:22 IST
Last Updated 5 ಜನವರಿ 2026, 0:22 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

– ಗೆಟ್ಟಿ ಚಿತ್ರ

ವಿದ್ಯಾರ್ಥಿ ವೇತನದ ಕುರಿತ ಮಾಹಿತಿ ಇಲ್ಲಿದೆ

ADVERTISEMENT

ನಾಯಕತ್ವದ ಕೌಶಲ ಸಿದ್ಧಿಸಿಕೊಳ್ಳಬೇಕೆ?

ಆಸ್ಪೈರ್‌ ಲೀಡರ್ಸ್‌ ಕಾರ್ಯಕ್ರಮವು ನಾಯಕತ್ವ ತರಬೇತಿಗಾಗಿ ಆಸ್ಪೈರ್‌ ಇನ್‌ಸ್ಟಿಟ್ಯೂಟ್‌ ವಿನ್ಯಾಸ ಮಾಡಿರುವ ಒಂದು ಆನ್‌ಲೈನ್‌ ಕೋರ್ಸ್‌ ಆಗಿದೆ. ವಿದ್ಯಾರ್ಥಿಗಳು ನಾಯಕತ್ವದ ಕೌಶಲಗಳನ್ನು ವೃದ್ಧಿಸಿಕೊಂಡು, ಕ್ರಿಯಾಶೀಲ ವೃತ್ತಿಪರರಾಗಿ ರೂಪುಗೊಳ್ಳಲು ಅನುವಾಗುವಂತೆ ರೂಪಿಸಿರುವ ಕಾರ್ಯಕ್ರಮ ಇದಾಗಿದೆ. 

ಅರ್ಹತೆ: ಆರ್ಥಿಕವಾಗಿ ಹಿಂದುಳಿದ, 18ರಿಂದ 29ರ ವಯೋಮಿತಿಯಲ್ಲಿ ಇರುವ ವಿದ್ಯಾರ್ಥಿಗಳು ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಪದವಿ ಕೋರ್ಸ್‌ಗೆ ದಾಖಲಾದವರು ಅಥವಾ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಮೊದಲ ಪೀಳಿಗೆಯ ಓದುಗರು ಅರ್ಹರಾಗಿರುತ್ತಾರೆ.

ಪ್ರಯೋಜನ: ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಾಪಕರು ನಡೆಸುವ ತರಬೇತಿ ಮತ್ತು ಕಾರ್ಯಕ್ರಮಗಳಿಗೆ ಉಚಿತ ಪ್ರವೇಶದ ಜೊತೆಗೆ ಇತರ ಅನುಕೂಲಗಳು ಇರುತ್ತವೆ.

ಅರ್ಜಿ ಸಲ್ಲಿಸಲು ಕೊನೇ ದಿನ: 23-01-2026
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಅರ್ಜಿಗಳು ಮಾತ್ರ

ಮಾಹಿತಿಗೆ:  Short Url: www.b4s.in/praja/ALPS2

ಅಂಗವಿಕಲರಿಗಾಗಿ ಆಧಾರ್ ಕೌಶಲ

ಆಧಾರ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ ನೀಡುವ ಅವಕಾಶ ಇದು. ಯಾವುದೇ ಭೇದವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. 

ಅರ್ಹತೆ: ಸಾಮಾನ್ಯ ಅಥವಾ ವೃತ್ತಿಪರ ಪದವಿ ಕೋರ್ಸ್‌ಗಳ ಯಾವುದೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅಂಗವಿಕಲರು ಅರ್ಜಿ ಸಲ್ಲಿಸಬಹುದು. ಭಾರತೀಯರಾಗಿರಬೇಕು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 60ರಷ್ಟು  ಅಂಕಗಳನ್ನು ಗಳಿಸಿರಬೇಕು.
ಕುಟುಂಬದ ಒಟ್ಟು ವಾರ್ಷಿಕ ಆದಾಯ ₹ 3 ಲಕ್ಷದ ಒಳಗಿರಬೇಕು.

ಆರ್ಥಿಕ ನೆರವು: ₹ 10,000ದಿಂದ ₹ 50,000ದವರೆಗೆ 

ಅರ್ಜಿ ಸಲ್ಲಿಸಲು ಕೊನೇ ದಿನ: 13-01-2026

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

ಹೆಚ್ಚಿನ ಮಾಹಿತಿಗೆ: Short Url: www.b4s.in/praja/AKSP2 ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.