ADVERTISEMENT

ಮತದಾನದ ಜಾಗೃತಿಗೆ ಬೈಕ್‌ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 14:35 IST
Last Updated 29 ಮಾರ್ಚ್ 2019, 14:35 IST
ಮತದಾನದ ಜಾಗೃತಿಗಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಗದುಗಿನ ಗಾಂಧಿ ವೃತ್ತದಲ್ಲಿ ಬೈಕ್‌ ರ್‍ಯಾಲಿ ನಡೆಸಿದರು
ಮತದಾನದ ಜಾಗೃತಿಗಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಗದುಗಿನ ಗಾಂಧಿ ವೃತ್ತದಲ್ಲಿ ಬೈಕ್‌ ರ್‍ಯಾಲಿ ನಡೆಸಿದರು   

ಗದಗ: ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸಲು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಹಮ್ಮಿಕೊಂಡಿದ್ದ ಬೈಕ್‌ ರ್‍ಯಾಲಿಗೆ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಚಾಲನೆ ನೀಡಿದರು.

‘ಪ್ರಜಾಪ್ರಭುತ್ವ ಬಲಪಡಿಗೊಳಿಸಬೇಕು ಎಂಬ ಆಶಯದೊಂದಿಗೆ ಜಿಲ್ಲಾ ಸ್ವೀಪ್ ಸಮಿತಿಯು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದು ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಟಿ.ದಿನೇಶ್ ಹೇಳಿದರು.

ಬೈಕ್ ರ್‍ಯಾಲಿಯು ಜಿಲ್ಲಾಡಳಿತ ಭವನದಿಂದ ಮುಳಗುಂದ ನಾಕಾ, ಜೋಡಿ ಮಾರುತೇಶ್ವರ ದೇವಸ್ಥಾನ, ಟಾಂಗಾಕೂಟ, ಸಿಟಿ ಮಾರುಕಟ್ಟೆ, ಮಹೇಂದ್ರಕರ ವೃತ್ತ, ತೋಂಟದಾರ್ಯ ಮಠದ ಮಾರ್ಗವಾಗಿ ಗಾಂಧಿ ವೃತ್ತದ ಬಳಿ ತಲುಪಿತು. ದಾರಿಯೂದ್ದಕ್ಕೂ ‘ಮತದಾನ ನಮ್ಮ ಹಕ್ಕು, ನಮ್ಮ ಮತ, ನಮ್ಮ ಶಕ್ತಿ’ ಎಂಬ ಘೋಷಣೆ ಕೂಗಲಾಯಿತು.

ADVERTISEMENT

ಜಿಲ್ಲಾ ನೋಡಲ್ ಅಧಿಕಾರಿ ಡಾ.ಎಸ್.ಎಫ್. ಸಿದ್ನೆಕೊಪ್ಪ, ಪ್ರೊ.ಎಸ್.ಎಲ್. ಗುಳೇದಗುಡ್ಡ, ಡಾ.ಆರ್.ಎಂ. ಕಲ್ಲನಗೌಡರ, ಪ್ರೊ.ಬಿ.ಬಿ. ಅಯ್ಯಪನವರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಗೌಡ ಆರ್. ಕಲ್ಮನಿಯವರ, ಪ್ರೊ.ಚಂದ್ರಶೇಖರ ಕಾಳನ್ನವರ, ಡಾ.ಬೆವಿನಕಟ್ಟಿ, ಪ್ರೊ.ಎನ್.ಕೆ. ಕಡೆಮನಿ, ಪ್ರೊ.ಸಂತೋಷ ಮುರಶಿಳ್ಳಿ, ಪ್ರೊ.ತ್ರಿವಿಕ್ರಮ ಕುಲಕರ್ಣಿ, ಪ್ರೊ.ಸಂತೋಷಕುಮಾರ, ಪ್ರೊ.ಮಾಚೆನಹಳ್ಳಿ ಭಾಗವಹಿಸಿದ್ದರು.

ಪ್ರೊ.ಚಿಕ್ಕೆನಕೊಪ್ಪ, ಪ್ರೊ.ವೈ.ಕೆ.ಗುಂಡಕರ್ಜಿಗಿ, ಪ್ರೊ.ಪದ್ಮಾ ತಳಕಲ್ಲ, ಡಾ.ಪರಿಮಳಾ ದೇಶಪಾಂಡೆ, ಪ್ರೊ.ಗೀತಾ ಮೇಟಿ, ಪ್ರೊ.ನೂರಜಾನ್ ಕದಾಂಪೂರ, ಪ್ರೊ.ನವೀನ ತಿರ್ಲಾಪೂರ, ಪ್ರೊ.ಎಂ.ಕೆ.ಕರ್ಲವಾಡ, ಪ್ರೊ.ವಂಕಣ್ಣವರ, ಪ್ರೊ.ಪರಶುರಾಮ ಕಟ್ಟಿಮನಿ, ಡಾ.ಶಂಕರ, ಪ್ರೊ.ಅಕ್ಷತಾ ಹಳಗೇಕರ, ಪ್ರೊ.ಸುಷ್ಮಾ, ಪ್ರೊ.ಟಿ.ಕೆ.ತಳವಾರ. ಪ್ರೊ.ಕೆ.ಎಂ.ಮುಲ್ಲಾ, ಪ್ರೊ.ಕರಿಯಪ್ಪ ಕೊಡವಳ್ಳಿ, ಪ್ರೊ.ಮಹಾಂತೇಶ ಕರ್ಲವಾಡ, ಪ್ರೊ.ಜಯಪ್ರಕಾಶ ದೊಡ್ಡೂರ, ಪ್ರೊ.ಬಿ.ಪಿ. ನವಲೂರಕರ, ಪ್ರೊ.ಎಸ್.ಎಸ್. ಹುಲ್ಲೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.