ADVERTISEMENT

ಮತ ಹಾಕಿ ಮಾದರಿಯಾಗಿ - ರಾಕೇಶ್‌ ಮಯ್ಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:10 IST
Last Updated 21 ಮಾರ್ಚ್ 2019, 20:10 IST
ರಾಕೇಶ್‌ ಮಯ್ಯ
ರಾಕೇಶ್‌ ಮಯ್ಯ   

‘ಮತದಾನ’ ಸಂವಿಧಾನ ನಮಗೆ ನೀಡಿದ ಹಕ್ಕು. ಒಂದು ವೇಳೆ ನಾವು ಮತದಾನದಲ್ಲಿ ಭಾಗಿಯಾಗದಿದ್ದರೆ ತಪ್ಪು ವ್ಯಕ್ತಿ ಆಯ್ಕೆಯಾಗುವ ಸಾಧ್ಯತೆಗಳಿರುತ್ತವೆ. ನಿಮ್ಮ ಒಂದು ಮತ ಉತ್ತಮ ನಾಯಕನನ್ನು ಆಯ್ಕೆ ಮಾಡಬಲ್ಲದು.

ನಮ್ಮ ಹಕ್ಕನ್ನು ಸರಿಯಾಗಿ ಚಲಾಯಿಸದಿದ್ದರೆ, ರಾಜಕಾರಣಿಗಳನ್ನು ದೂರುವ ಹಕ್ಕೂ ನಮಗಿರುವುದಿಲ್ಲ. ಇತರರಿಗೆ ಮತ ಹಾಕಿ ಎಂದು ಉಪದೇಶಿಸುವ ಮೊದಲು, ನಾವು ಮತದಾನ ಮಾಡಿ ಇತರರಿಗೆ ಮಾದರಿಯಾಗಬೇಕು. ಚುನಾವಣೆಗೆ ನಿಂತ ಅಭ್ಯರ್ಥಿ ತನ್ನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳೇನು? ಆತನ ವ್ಯಕ್ತಿತ್ವ, ಸಾಮರ್ಥ್ಯದ ಕುರಿತು ಯೋಚಿಸಿ ಸರಿಯಾದವರನ್ನೇ ಆಯ್ಕೆ ಮಾಡುವುದು ನಮ್ಮ ಹೊಣೆ. ಆಶ್ವಾಸನೆ ನೀಡುವವರಿಗೆ ಮತ ಹಾಕದೇ ದೇಶಕ್ಕಾಗಿ ದುಡಿಯುವ ಅಭ್ಯರ್ಥಿಗೆ ವೋಟ್‌ ಹಾಕಿ. ಸಾಮಾಜಿಕ ಜವಾಬ್ದಾರಿ ನಿಭಾಯಿಸಿ.

– ರಾಕೇಶ್‌ ಮಯ್ಯ,ಕಿರುತೆರೆ ನಟ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.