
ಪ್ರಜಾವಾಣಿ ವಾರ್ತೆಚೆನ್ನೈ (ಐಎಎನ್‌ಎಸ್): ಇತ್ತೀಚೆಗಷ್ಟೇ ಪಕ್ಷದಿಂದ ಅಮಾನತು ಮಾಡಲಾದ ನಾಯಕ ಎಂ.ಕೆ.ಅಳಗಿರಿ ಅವರಿಂದ ದೂರವಿರುವಂತೆ ಪಕ್ಷದ ಸದಸ್ಯರಿಗೆ ಡಿಎಂಕೆ ಸೂಚಿಸಿದೆ.
‘ಅಳಗಿರಿ ಅವರ ಜತೆ ಸಂಪರ್ಕ ಹೊಂದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಕ್ಷ ಹೇಳಿದೆ.
‘ಅಳಗಿರಿ ಅವರು ತಮ್ಮ ಬೆಂಬಲಿಗರ ಜತೆ ಅಕಾರಣವಾಗಿ ಸಭೆ ಸೇರಿ ಪಕ್ಷದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಅನ್ಬಳಗನ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.