ADVERTISEMENT

‘ಪದ್ಮಶ್ರೀ’ ಬಳಸದಂತೆ ಟರ್ಕಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2014, 19:30 IST
Last Updated 8 ಏಪ್ರಿಲ್ 2014, 19:30 IST

ಭುವನೇಶ್ವರ(ಪಿಟಿಐ): ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳು ತಮ್ಮ ಹೆಸರಿನ ಹಿಂದೆ ತಾವು ಪಡೆದ ‘ಪದ್ಮಶ್ರೀ’ ಪ್ರಶಸ್ತಿಯನ್ನು ಉಲ್ಲೇಖಿಸುತ್ತಿರುವುದು ಸರಿಯಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಒಡಿಶಾದ ಸುಂದರಗಡ ಲೋಕಸಭೆ ಕ್ಷೇತ್ರದ ಬಿಜೆಡಿ ಅಭ್ಯರ್ಥಿ, ಮಾಜಿ ಹಾಕಿ ಪಟು ದಿಲೀಪ್‌ ಟರ್ಕಿ ಅವರು ‘ಪದ್ಮಶ್ರೀ’ ಬಳಸುತ್ತಿರು­ವುದಕ್ಕೆ ಆಯೋಗ ಮೇಲಿ­ನಂತೆ ಹೇಳಿದೆ.

‘ಪೋಸ್ಟರ್‌, ಬ್ಯಾನರ್‌, ಕರಪತ್ರ ಮತ್ತು ಫ್ಲೆಕ್ಸ್‌ಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಬಗ್ಗೆ ಉಲ್ಲೇಖಿಸುವುದು ಸರಿ­ಯಲ್ಲ. ಒಂದು ರೀತಿಯಿಂದ ಇದು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದಂತಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಟರ್ಕಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT