ADVERTISEMENT

24ಕ್ಕೆ ಎಎಪಿ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 10:59 IST
Last Updated 23 ಮಾರ್ಚ್ 2014, 10:59 IST

ತುಮಕೂರು: ಆಮ್‌ ಆದ್ಮಿ ಪಕ್ಷದ ನಿಯೋಜಿತ ಅಭ್ಯರ್ಥಿ ಎ.ಎಸ್‌.ಡಿಸಿಲ್ವಾ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಡಿಸಿಲ್ವಾ ಅವರಿಗೆ ಪಕ್ಷದ ಟಿಕೆಟ್ ಘೋಷಣೆಯಾದ ನಂತರ ನಗರಕ್ಕೆ ಆಗಮಿಸಿದ ಅವರು ಮಧುಗಿರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಬೆಂಬಲಿಗರ ಸಭೆ ನಡೆಸಿ, ಮುಂದಿನ ನಡೆ ಬಗ್ಗೆ ಚರ್ಚಿಸಿದರು.

ಮತದಾನ ಜಾಗೃತಿ ಸಭೆ
ತುಮಕೂರು:
ಮಾದಿಗ ಸಮುದಾಯ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಸಾಮಾಜಿಕ ನ್ಯಾಯ ಕಾಪಾಡು­ವಂತಹ ವ್ಯಕ್ತಿಗೆ ಮತ ಹಾಕಬೇಕೆಂದು ಡಿಎಸ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್‌.­ರಾಮಯ್ಯ ಹೇಳಿದರು.

ನಗರದಲ್ಲಿ ಈಚೆಗೆ ನಡೆದ ರಾಜಕೀಯ ಸವಾಲು ಮತ್ತು ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತ­ನಾಡಿ, ಇದುವರೆಗೆ ಮಾದಿಗ ಸಮುದಾಯವನ್ನು ರಾಜಕಾರಣಿಗಳು ಕಡೆಗಣಿಸುತ್ತಾ ಬಂದಿದ್ದಾರೆ. ಈಗಲಾದರೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವಂತಹ ವ್ಯಕ್ತಿಗೆ ಮತ ನೀಡಬೇಕು ಎಂದರು.

ಮುಖಂಡರಾದ ಗಂಗಣ್ಣ, ಎ.ನಾಗೇಶ್‌್, ಎ.ಕೃಷ್ಣ­ಮೂರ್ತಿ, ಮಂಜುನಾಥ್‌್, ಚಂದ್ರಶೇಖರ್‌, ಭೀಮಣ್ಣ, ಮಂಜುನಾಥ್‌, ಮದ್ಲಟಪ್ಪ, ಲಕ್ಷ್ಮೀನರಸಯ್ಯ, ಗೋವಿಂದರಾಜ್‌ ಇತರರು ಭಾಗವಹಿಸಿದ್ದರು.

ಬಿ ಫಾರಂಗೆ ಹಣ
ಬಿ ಫಾರಂ ನೀಡಲು ಅಭ್ಯರ್ಥಿಗಳಿಂದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ₨ 10ರಿಂದ 20 ಕೋಟಿ ಹಣ ವಸೂಲಿ ಮಾಡುತ್ತಿವೆ ಎಂದು ಬಿಎಸ್‌ಪಿಯ ಮಾರ­ಸಂದ್ರ ಮುನಿಯಪ್ಪ ಆರೋಪಿಸಿದರು.

ರಾಷ್ಟ್ರೀಯ ಪಕ್ಷಗಳ ಸಾಧನೆ ಏನೆಂಬುದು ಜನರಿಗೆ ಮನವರಿಕೆ ಆಗಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ತುಂಬಿ­ರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಪಕ್ಷಗಳ ಬಗ್ಗೆ ಜನರಲ್ಲಿ ತಿರಸ್ಕಾರ ಮನೋಭಾವವಿದೆ. ಭ್ರಷ್ಟಾ­ಚಾರ, ಗಣಿ ಅಕ್ರಮ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.