ADVERTISEMENT

ಎಂಥಾ ಮಾತು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 23:47 IST
Last Updated 1 ಏಪ್ರಿಲ್ 2024, 23:47 IST
ಅಖಿಲೇಶ್‌ ಯಾದವ್
ಅಖಿಲೇಶ್‌ ಯಾದವ್   

ನಾವು ಚುನಾವಣೆಯ ತಿಂಗಳಿಗೆ ಕಾಲಿಟ್ಟಿದ್ದೇವೆ. ಮತದಾನ ಪ್ರಕ್ರಿಯೆ ನಿಷ್ಪಕ್ಷಪಾತವಾಗಿ ನಡೆದರೆ ಅದು ಚುನಾವಣಾ ಆಯೋಗಕ್ಕೆ ದೊರೆತ ಗೆಲುವು ಎಂದೇ ಭಾವಿಸಬೇಕು. ಸರ್ಕಾರವು ಇ.ಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳ ದುರ್ಬಳಕೆ ಮಾಡುವುದನ್ನು ತಡೆಯುವ ಮೂಲಕ ಚುನಾವಣಾ ಆಯೋಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದುಕೊಂಡರೆ ಮಾತ್ರ ಚುನಾವಣಾ ಆಯೋಗದ ಘನತೆ ಉಳಿಯುತ್ತದೆ

- ಅಖಿಲೇಶ್‌ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

ಈಶಾನ್ಯದ ರಾಜ್ಯಗಳ ಅಭಿವೃದ್ಧಿ ಆಗದಿದ್ದರೆ ದೇಶವು ಅಭಿವೃದ್ಧಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಂಬಿದ್ದಾರೆ. ಅಭಿವೃದ್ಧಿ ಆಗಬೇಕಾದರೆ ಶಾಂತಿ ನೆಲೆಸುವುದು ಅಗತ್ಯ ಎಂಬುದನ್ನು ಮನಗಂಡಿರುವ ಅವರು ಈಶಾನ್ಯ ರಾಜ್ಯಗಳ ವಿವಿಧ ಸಂಘಟನೆಗಳೊಂದಿಗೆ 12 ಒಪ್ಪಂದಗಳನ್ನು ಮಾಡಿದ್ದಾರೆ. ಇಂದು ತ್ರಿಪುರ ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ಪ್ರದೇಶದಲ್ಲಿ ಶಾಂತಿ ನೆಲೆಸಿದೆ

ADVERTISEMENT

- ಮಾಣಿಕ್‌ ಸಹಾ, ತ್ರಿಪುರ ಮುಖ್ಯಮಂತ್ರಿ

ಮಾಣಿಕ್‌ ಸಹಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.