ADVERTISEMENT

ಎಡಪಕ್ಷಗಳಿಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 16 ಮೇ 2014, 19:30 IST
Last Updated 16 ಮೇ 2014, 19:30 IST

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳ ದಲ್ಲಿ ನಿರಂತರವಾಗಿ 34 ವರ್ಷಗಳ ಕಾಲ ಆಡಳಿತ ನಡೆಸಿದ್ದ ಎಡಪಕ್ಷಗಳು ಲೋಕಸಭಾ ಚುನಾವಣೆ­ಯಲ್ಲಿ ಹೀನಾಯ ಸೋಲು ಅನುಭ­ವಿಸಿವೆ. ತೃಣಮೂಲ ಕಾಂಗ್ರೆಸ್‌್ 34 ಸ್ಥಾನಗಳನ್ನು ಪಡೆದರೆ ಸಿಪಿಎಂ ಕೇವಲ ಎರಡು ಸ್ಥಾನಗಳನ್ನು ಗಳಿಸಿದೆ. 

ತೃಣಮೂಲ ಕಾಂಗ್ರೆಸ್‌ ಚುನಾವಣೆ ಯಲ್ಲಿ ಭಾರಿ ಅಕ್ರಮ ನಡೆಸಿವೆ ಎಂದು ಎಡಪಕ್ಷಗಳು ಆರೋಪಿಸಿವೆ. ‘ನಾವು ಫಲಿತಾಂಶ ಒಪ್ಪಿಕೊಳ್ಳು ವುದಿಲ್ಲ. ಇದು ಎಡಪಕ್ಷಗಳ ನಿಜವಾದ ಬಲ ಮತ್ತು ಸ್ಥಿತಿಯನ್ನು ಬಿಂಬಿಸುವು­ದಿಲ್ಲ’ ಎಂದು ಸಿಪಿಎಂ ಪ್ರಧಾನ ಕಾರ್ಯ­­ದರ್ಶಿ ಪ್ರಕಾಶ್‌ ಕಾರಟ್‌ ಹೇಳಿದ್ದಾರೆ.

‘ಬದಲಾವಣೆಗಾಗಿ ಜನ ಈ ಬಾರಿ ಮತ ಚಲಾಯಿಸಿದ್ದಾರೆ. ಅದೇ ರೀತಿ ಯುಪಿಎ ಸರ್ಕಾರದ ನೀತಿಗಳ ವಿರು­ದ್ಧವಾಗಿದ್ದಾರೆ’ ಎಂದು ಕಾರಟ್‌ ಹೇಳಿ­ದ್ದಾರೆ. ಕೇರಳದಲ್ಲಿ ಎಡಪಕ್ಷಗಳು ಸ್ವಲ್ಪ ಸಾಧನೆ ಮಾಡಿದ್ದರೆ ತ್ರಿಪುರಾದಲ್ಲಿ ಸಂಖ್ಯೆ ಹೆಚ್ಚಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.