ADVERTISEMENT

‘ಮೋದಿ ಉತ್ತರಾಧಿಕಾರಿ ಯಾರು’ ಚರ್ಚೆಗೆ ಚಾಲನೆ

ಮತಗಟ್ಟೆ ಸಮೀಕ್ಷೆಗಳಲ್ಲಿ ಎನ್‌ಡಿಎ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 13 ಮೇ 2014, 19:30 IST
Last Updated 13 ಮೇ 2014, 19:30 IST

ಅಹಮದಾಬಾದ್‌ (ಪಿಟಿಐ): ವಿವಿಧ ಸುದ್ದಿವಾಹಿನಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಗಳಲ್ಲಿ ಎನ್‌ಡಿಎ ದೇಶದ  ಚುಕ್ಕಾಣಿ ಹಿಡಿಯುವುದಾಗಿ ಪ್ರಕಟಗೊಂಡ ಬೆನ್ನಲ್ಲೇ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ಆದರೆ ಈ ವಿಷಯವನ್ನು ಅಲ್ಲಗಳೆದಿ ರುವ  ರಾಜ್ಯ ಬಿಜೆಪಿ, ಪಕ್ಷ ಮಾಮೂಲಿ ಸಭೆಗಳನ್ನು ಮಾತ್ರ ನಡೆಸಿದೆ ಎಂದು ತಿಳಿಸಿದೆ.
ಗುಜರಾತ್‌ ಬಿಜೆಪಿ ಘಟಕದ ಪ್ರಮುಖರ ಸಭೆ ಮಂಗಳವಾರ ನಡೆದಿದೆ. ಒಂಬ­ತ್ತನೇ ಹಂತದ ಚುನಾವಣೆ ಅಂತ್ಯಗೊಂಡ ನಂತರ ಮುಂದಿನ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಹುದ್ದೆಗೆ ಹಲವು ಹೆಸರು: ಗುಜರಾತ್‌ನ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳ ಹಲವು ಹೆಸರುಗಳು ಚಾಲ್ತಿಗೆ ಬಂದಿವೆ. ಅವರಲ್ಲಿ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮಿತ್‌ ಷಾ, ಮತ್ತು ಮೋದಿ ಅವರ ಆಪ್ತರಾದ ಆನಂದಿ ಪಟೇಲ್‌, ನಿತಿನ್‌ ಪಟೇಲ್‌, ಸೌರಭ್‌ ಪಟೇಲ್ ಹಾಗೂ ಭಿಕು ದಾಲ್ಸಾನಿಯ ಪ್ರಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.