ADVERTISEMENT

4ನೇ ಹಂತದ ಮತದಾನಕ್ಕೆ ಅಧಿಸೂಚನೆ

ಪಿಟಿಐ
Published 2 ಏಪ್ರಿಲ್ 2019, 20:07 IST
Last Updated 2 ಏಪ್ರಿಲ್ 2019, 20:07 IST

ನವದೆಹಲಿ: ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನಕ್ಕೆ ಆಯೋಗ ಅಧಿಸೂಚನೆ ಹೊರಡಿಸಿದೆ. ಏ. 29ರಂದು ಒಂಬತ್ತು ರಾಜ್ಯಗಳ 71 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.ನಾಮಪತ್ರ ಸಲ್ಲಿಕೆಗೆ ಏ. 9 ಕೊನೆಯ ದಿನ.

ಬಿಹಾರದ ಐದು, ಜಾರ್ಖಂಡ್‌ನ ಮೂರು, ಮಧ್ಯಪ್ರದೇಶದ ಆರು, ಮಹಾರಾಷ್ಟ್ರದ 17, ಒಡಿಶಾದ ಆರು, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ತಲಾ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಮತದಾನ ನಿಗದಿ ಆಗಿದೆ.

ಬಿಹಾರದ ದರ್ಭಾಂಗ್, ಬೇಗುಸರಾಯ್, ರಾಜಸ್ಥಾನದ ಟೊಂಕ್–ಸವಾಯ್ ಮಾಧೋಂಪುರ, ಅಜ್ಮೀರ್, ಜೋಧಪುರ, ಬಾರ್ಮೇರ್, ಉತ್ತರ ಪ್ರದೇಶದ ಹರ್ದೋಯ್, ಉನ್ನಾವ್, ಇಟಾವಾ, ಕಾನ್ಪುರ, ಹಮೀರ್‌ಪುರ ಮತದಾನ ನಡೆಯ ಲಿರುವ ಕೆಲವು ಪ್ರಮುಖ ಕ್ಷೇತ್ರಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.