ADVERTISEMENT

ಟಿಕೆಟ್‌ಗಾಗಿ ಗುರು–ಶಿಷ್ಯರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:30 IST
Last Updated 11 ಏಪ್ರಿಲ್ 2018, 19:30 IST
ಎಸ್‌. ತಿಪ್ಪೇಸ್ವಾಮಿ,  ಎನ್‌.ವೈ. ಗೋಪಾಲಕೃಷ್ಣ, ಡಾ. ಬಿ. ಯೋಗೇಶ್‌ ಬಾಬು
ಎಸ್‌. ತಿಪ್ಪೇಸ್ವಾಮಿ, ಎನ್‌.ವೈ. ಗೋಪಾಲಕೃಷ್ಣ, ಡಾ. ಬಿ. ಯೋಗೇಶ್‌ ಬಾಬು   

ಮೊಳಕಾಲ್ಮುರು: ವಿಧಾನಸಭಾ ಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಗುರು–ಶಿಷ್ಯರ ನಡುವೆಯೇ ಪೈಪೋಟಿ ನಡೆಯುತ್ತಿದೆ!

ಬಿಜೆಪಿಯಲ್ಲಿ ಸಂಸದ ಬಿ. ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡಿರುವುದು, ಕ್ಷೇತ್ರದ ಹಾಲಿ ಶಾಸಕ ಎಸ್‌. ತಿಪ್ಪೇಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

2013ರ ಚುನಾವಣೆಯಲ್ಲಿ ಬಿಎಸ್‌ಆರ್‌ನಿಂದ ಸ್ಪರ್ಧೆ ಮಾಡಿದ್ದ ತಿಪ್ಪೇಸ್ವಾಮಿ, ‘ಶ್ರೀರಾಮುಲು ನನಗೆ ರಾಜಕೀಯ ಗುರು’ ಎಂದು ಹೇಳಿದ್ದರು. ಟಿಕೆಟ್‌ ಸಿಗದೇ ಹೋದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಚ್ಚರಿಕೆಯನ್ನು ತಿಪ್ಪೇಸ್ವಾಮಿ ನೀಡಿದ್ದಾರೆ. ಹೀಗೆ ಆದಲ್ಲಿ ಗುರು–ಶಿಷ್ಯರ ಮಧ್ಯೆ ಪೈಪೋಟಿ ಏರ್ಪಡಲಿದೆ.ಕಾಂಗ್ರೆಸ್‌ನಲ್ಲೂ ಟಿಕೆಟ್‌ ಹಂಚಿಕೆ ತಲೆನೋವಾಗಿದೆ. ನಟ ಶಶಿಕುಮಾರ್, ಶಾಸಕ ಎನ್.ವೈ. ಗೋಪಾಲಕೃಷ್ಣ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಬಿ. ಯೋಗೇಶ್‌ ಬಾಬು ಕಾಂಗ್ರೆಸ್‌ ಟಿಕೆಟ್‌ನ ಪ್ರಮುಖ ಆಕಾಂಕ್ಷಿಗಳು.

ADVERTISEMENT

‘ಎನ್‌ವೈ ಅವರೇ ನನ್ನ ರಾಜಕೀಯ ಗುರು’ ಎಂದು ಈ ಹಿಂದೆ ಯೋಗೇಶ್‌ ಬಾಬು ಹೇಳುತ್ತಿದ್ದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೋಪಾಲಕೃಷ್ಣ ಅವರು ಯೋಗೇಶ್‌ ಪರ ಪ್ರಚಾರ ನಡೆಸಿದ್ದರು. ಆದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನ ತಪ್ಪಲು ಗೋಪಾಲಕೃಷ್ಣ ಅವರೇ ಕಾರಣ ಎಂದು ಅವರ ವಿರುದ್ಧ ಯೋಗೇಶ್‌ ಬಾಬು ಸಡ್ಡು ಹೊಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.